Mysore
24
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಸೀನಿಯರ್‌ ಡಾಕ್ಟರ್‌ ಇತಿಹಾಸವನ್ನೇ ತಿರುಚಲು ಯತ್ನಿಸಿದ್ದಾರೆ: ಸಚಿವ ಎಚ್‌ಸಿಎಂ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

prathap simha

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಶುರು ಮಾಡಿದ್ದು ಟಿಪ್ಪು ಸುಲ್ತಾನ್‌ ಎಂದೇ ಹೇಳಿಬಿಡಿ ಎಂದು ಸಚಿವ ಮಹದೇವಪ್ಪ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.

ಕೆಆರ್‌ಎಸ್‌ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜ್ಯೂನಿಯರ್‌ ಡಾಕ್ಟರ್‌ ಹೊಸ ಇತಿಹಾಸ ಬರೆಯಲು ಹೊರಟರೆ, ಸೀನಿಯರ್‌ ಡಾಕ್ಟರ್‌ ಇತಿಹಾಸವನ್ನೇ ತಿರುಚಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜ್ಯೂನಿಯರ್‌ ಡಾಕ್ಟರ್‌ ಯತೀಂದ್ರ ನಾಲ್ವಡಿಗಿಂತ ನಮ್ಮಪ್ಪನೇ ದೊಡ್ಡ ವ್ಯಕ್ತಿ ಎಂದಿದ್ದರು. ಈಗ ಸೀನಿಯರ್‌ ಡಾಕ್ಟರ್‌ ಮಹದೇವಪ್ಪ ಅವರ ಸರದಿ ಎಂದು ವ್ಯಂಗ್ಯವಾಡಿದರು.

ಟಿಪ್ಪು ಸುಲ್ತಾನ್‌ ಕೆಆರ್‌ಎಸ್‌ಗೆ ಅಡಿಗಲ್ಲು ಇಟ್ಟಿದ್ದರೆ ಯಾರೋ ಮುಲ್ಲಾನ ಮೌಲ್ವಿನೋ ಡಿಪಿಆರ್‌ ಮಾಡಿರಬೇಕು ತಾನೇ? ಅವರು ಯಾರು ಎಂದು ಹೇಳಲಿ. ಟಿಪ್ಪು ಆಳ್ವಿಕೆ ಇದ್ದ ವೇಳೆ ವಿಶ್ವೇಶ್ವರಯ್ಯ ಅವರೇ ಹುಟ್ಟಿರಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಇರದಿದ್ದರೆ ಕೆಆರ್‌ಎಸ್‌ ಜಲಾಶಯವೇ ನಿರ್ಮಾಣ ಆಗುತ್ತಿರಲಿಲ್ಲ. 1799ರಲ್ಲಿ ಟಿಪ್ಪು ಸುಲ್ತಾನ ಸತ್ತೋದ. 1911ರಲ್ಲಿ ಕೆಆರ್‌ಎಸ್‌ ಕಟ್ಟಲು ಶುರು ಮಾಡಿದರು ಎಂದು ಹೇಳಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಫೇಕ್‌ ನ್ಯೂಸ್‌ ಹರಡಿದವರ ಮೇಲೆ ಕೇಸ್‌ ಹಾಕೋಕೆ ಕಾಯ್ದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮೊದಲು ಈ ಕಾಯ್ದೆ ತರಲಿ. ಮೊದಲ ಕೇಸ್‌ ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್‌, ಯತೀಂದ್ರ ಮೇಲೆಯೇ ಹಾಕಿಸಿ. ಮಹಾರಾಜರ ಬಗ್ಗೆ ಸಿದ್ದರಾಮಯ್ಯಗೆ ರಕ್ತಗತವಾಗಿ ದ್ವೇಷ ಬಂದಿದೆ ಎಂದು ಕಿಡಿಕಾರಿದರು.

Tags:
error: Content is protected !!