ಮೈಸೂರು: 18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಅಭಿಮಾನಿಗಳಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ವಿತರಣೆ ಮಾಡಲಾಯಿತು.
ಮೈಸೂರಿನಲ್ಲಿರುವ ಒಟ್ಟು 16 ಇಂದಿರಾ ಕ್ಯಾಂಟೀನ್‌ಗಳಲ್ಲೂ ಹೋಳಿಗೆ ಊಟ ನಡೆಯುತ್ತಿದ್ದು, ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಸುಬ್ಬಣ್ಣ, ಸಮಾಜ ಸೇವಕಿ ಖುಷಿ, ವಿನು ಸೇರಿದಂತೆ ಹಲವಾರು ಅಭಿಮಾನಿಗಳ ಸಮ್ಮುಖದಲ್ಲಿ ಹೋಳಿಗೆ ಊಟ ವಿತರಣೆ ಮಾಡಲಾಯಿತು.
ಹೋಳಿಗೆ ಊಟ ಸವಿಯಲು ಕ್ಯಾಂಟೀನ್ ಬಳಿ ಜನರು ಮುಗಿಬಿದ್ದಿದ್ದು, ನಗರದ ಕೆ.ಆರ್.ಆಸ್ಪತ್ರೆ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.
ಇದನ್ನೂ ಓದಿ:- ಐಪಿಎಲ್ ಟ್ರೋಫಿ ಹೊತ್ತು ಬೆಂಗಳೂರಿಗೆ ಬರುತ್ತಿರುವ ಆರ್‌ಸಿಬಿ ಚಾಂಪಿಯನ್ಸ್
ಬಳಿಕ ಉಳಿದ ಎಲ್ಲಾ ಕ್ಯಾಂಟೀನ್‌ಗಳಲ್ಲೂ ಅಭಿಮಾನಿಗಳು ಹೋಳಿಗೆ ಊಟ ಕೊಡಲು ಮುಂದಾಗಿದ್ದು, ಸಾರ್ವಜನಿಕರು ಹೋಳಿಗೆ ಊಟ ಸವಿದು ಸಂತಸ ವ್ಯಕ್ತಪಡಿಸಿದ್ದಾರೆ.





