ಮೈಸೂರು: ಪಿಎಚ್‌ಡಿ ಪ್ರವೇಶಾತಿ ನಿರಾಕರಣೆ ಮಾಡಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್‌ಡಿ ಆಕಾಂಕ್ಷಿ ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದರು.
ಮೈಸೂರು ವಿವಿ ಆಡಳಿತದ ವಿರುದ್ಧ ವಿದ್ಯಾರ್ಥಿಗಳು ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಾಧ್ಯಾಪಕರಿಗೆ ಹೆಚ್ಚುವರಿ ಗೈಡ್ ಅವಕಾಶ ನೀಡಲು ಆಗ್ರಹಿಸಿದರು.
ವಿಶ್ವವಿದ್ಯಾನಿಲಯವು ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕೊಡಲಿ ಇಡುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಸಹ ಪ್ರಾಧ್ಯಾಪಕ 4, ಸಹಾಯಕ ಪ್ರಾಧ್ಯಾಪಕ 6, ಪ್ರಾಧ್ಯಾಪಕ 8 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹೆಚ್ಚುವರಿಯಾಗಿ ಸಹ ಪ್ರಾಧ್ಯಾಪಕ 2, ಸಹಾಯಕ ಪ್ರಾಧ್ಯಾಪಕ 3, ಪ್ರಾಧ್ಯಾಪಕರಿಗೆ 4 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುವಂತೆ ಪ್ರತಿಭಟನೆಯಲ್ಲಿ ಮನವಿ ಮಾಡಿದರು.





