Mysore
29
clear sky

Social Media

ಮಂಗಳವಾರ, 10 ಮಾರ್ಚ್ 2026
Light
Dark

ಮೈಸೂರು| ರಾತ್ರೋರಾತ್ರಿ ಶ್ರೀಗಂಧದ ಮರ ಕಳ್ಳತನ

sandalwood tree theft

ಮೈಸೂರು: ರಾತ್ರೋರಾತ್ರಿ ಖದೀಮರು ಶ್ರೀಗಂಧದ ಮರ ಕಳ್ಳತನ ಮಾಡಿರುವ ಘಟನೆ ಸರಸ್ವತಿಪುರಂನಲ್ಲಿರುವ ಹ್ಯಾಪಿ ಮ್ಯಾನ್ ಪಾರ್ಕ್‌ನಲ್ಲಿ ನಡೆದಿದೆ.

ಸರಸ್ವತಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಖದೀಮರು ರಾತ್ರೋರಾತ್ರಿ ಶ್ರೀಗಂಧದ ಮರ ಕಡಿದು ಕಳ್ಳತನ ಮಾಡಿದ್ದಾರೆ. ಇದು ಬೆಳಿಗ್ಗೆ ವಾಯುವಿಹಾರಿಗಳು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಘಟನಾ ಸ್ಥಳಕ್ಕೆ ಸರಸ್ವತಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:- ಸಿಎಂ ತವರು ಜಿಲ್ಲೆಯಲ್ಲಿ ಮತ್ತೊಂದು ಕಡೆ ಅಂಬೇಡ್ಕರ್ ನಾಮಫಲಕಕ್ಕೆ ಅಪಮಾನ

ಕಳ್ಳತನ ಸಂಬಂಧ ಪಾರ್ಕ್‌ ಸುತ್ತಮುತ್ತಲೂ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.

Tags:
error: Content is protected !!