ಮೈಸೂರು: ಶರನ್ನವರಾತ್ರಿಯ ಮೂರನೇ ದಿನ ದೇವಿಯನ್ನು ಚಂದ್ರಘಂಟಾ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.
ಚಂದ್ರಿಕಾ, ರಣಚಂಡಿ ಅಂತಲೂ ಕರೆಯುತ್ತಾರೆ. ಆ ದೇವಿಯ ವಿಗ್ರಹವನ್ನು ಇರಿಸಿ, ಪೂಜೆ-ಆರಾಧನೆಯನ್ನು ಮಾಡಲಾಗುತ್ತದೆ. ಈ ದೇವಿಯ ಸ್ವರೂಪವು ಶಾಂತ ರೀತಿಯಲ್ಲಿ ಇರುತ್ತದೆ.
ತಾಯಿಯ ತಲೆ ಮೇಲೆ ಗಂಟೆಯ ಆಕಾರದಲ್ಲಿ ಅರ್ಧ ಚಂದ್ರ ಇರುವುದರಿಂದ ಚಂದ್ರಘಂಟಾ ದೇವಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.
ಚಂದ್ರಘಂಟಾ ದೇವಿಯು ಶುಕ್ರ ಗ್ರಹದ ಅಧಿದೇವತೆ ಆಗಿದ್ದು, ದೇವಿಯ ಆರಾಧನೆಯಿಂದ ಸಂಪತ್ತು, ಸಮೃದ್ಧಿ ದೊರೆಯುತ್ತದೆ. ಮನೆಯಲ್ಲಿ ಯಾವತ್ತಿಗೂ ಆಹಾರದ ಕೊರತೆ ಬಾರದು ಎಂದು ಹೇಳಲಾಗುತ್ತದೆ.
ನವರಾತ್ರಿಯ ಮೂರನೇ ದಿನ ಕೆಂಪು ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ. ಚಂದ್ರಘಂಟಾ ದೇವಿಯು ಧೈರ್ಯ, ಪರಾಕ್ರಮ ಹಾಗೂ ಸೌಂದರ್ಯದ ಪ್ರತೀಕವಾಗಿದ್ದು, ಕೆಂಪು ಬಣ್ಣದ ವಸ್ತ್ರಗಳಿಂದ ತಾಯಿಗೆ ಅಲಂಕಾರ, ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಲಾಗುತ್ತದೆ.