ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಮೈಸೂರಿಗೆ ಬಂದ ಆನೆಗಳು ನಿನ್ನೆ(ಆ.13) ತಾನೆ ಅರಮನೆ ಆವರಣ ಸೇರಿವೆ.
ಅರವನೆ ಆವರಣದಲ್ಲಿ ಬೀಡುಬಿಟ್ಟಿರುವ ಅಭಿಮನ್ಯ ನೇತೃತ್ವದ ಆನೆಗಳಿಗೆ ರಾಜಾತಿಥ್ಯ ಶುರುವಾಗಿದ್ದು, ರಾಜಭಕ್ಷ್ಯಗಳನ್ನು ಸೇವಿಸಿ ವಿಶ್ರಮಿಸಿಕೊಂಡು ನಂತರ ಇಂದು ಬೆಳಿಗ್ಗೆ ಗಜಪಡೆಯನ್ನು ಮಾರ್ನಿಂಗ್ ವಾಕ್‌ಗೆ ಕರೆದೊಯ್ಯಲಾಯಿತು.
ಇಂದಿನ ಬೆಳಿಗಿನ ವಿಹಾರದಲ್ಲಿ ಅಭಿಮನ್ಯು ಬದಲು ಏಕಲವ್ಯ ಲೀಡ್ ಮಾಡುತ್ತಿದ್ದ. ಏಕಲವ್ಯ ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಲೇ ತಿಳಿದಿರುವಂತೆ ಮುಂಬರುವ ವರ್ಷಗಳಲ್ಲಿ ಅಂಬಾರಿ ಹೊರುವ ಕೆಲಸ ಏಕಲವ್ಯನ ಹೆಗಲಿದೆ ಹಾಕಲಾಗಿದೆ. ಹೀಗಾಗಿ, ಈಗಿಂದಲೇ ಲೀಡ್ ಮಾಡುವ ತರಬೇತಿಯನ್ನು ಮಾವುತ ಮತ್ತು ಕಾವಾಡಿಗರು ಆರಂಭಿಸಿದಂತಿದೆ.




