ಪ್ರಶಾಂತ್ ಎನ್ ಮಲ್ಲಿಕ್, ಮೈಸೂರು
ಮೈಸೂರು: ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಬೇಕು ಎಂಬ ಬಯಕೆ ಎಲ್ಲರಿಗೂ ಇದ್ದೇ ಇರುತ್ತಿತ್ತು, ಆದರೆ ಅವರು ಮರಣ ಹೊಂದಿದ್ದಾರೆ. ಈಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಯಾದರೆ ತಮ್ಮ ಮೆಚ್ಚಿನ ನಟನನ್ನು ನೋಡಿದಷ್ಟು ಅನುಭವ ಅಭಿಮಾನಿಗಳಿಗೆ ಆಗುತ್ತದೆ. ಅದರಂತೆ ಮೈಸೂರಿನ ಚಿತ್ರಕಲಾ ತಂಡದವರು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಮೈಸೂರಿನ ಪುನೀತ್ ಹಾಗೂ ಅವರ ರಂಗೋಲಿ ಕಲೆಗೆ ಜೊತೆಗೂಡಿ ಕೆಲಸವನ್ನು ಮಾಡುತ್ತಿರುವ ಕಲಾವಿದರು ಭೇಟಿಯಾಗಿದ್ದರು.
ಕೆಲವು ದಿನಗಳ ಹಿಂದೆ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸುಮಾರು 8200 ಎತ್ತರದ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಮೂರು ದಿನಗಳ ಕಾಲ ಪರಿಶ್ರಮ ದಿಂದ ಬಣ್ಣ ಬಣ್ಣದ ರಂಗೋಲಿ ಮೂಲಕ ಬಿಡಿಸಿದ್ದರು. ಅದನ್ನು ವರ್ಡ್ ಗಿನ್ನಿಸ್ ರೆಕಾರ್ಡ್ ದಾಖಲೆಗೂ ಕಳುಹಿಸಿದ್ದಾರೆ.
ಈ ತಂಡವು ಪ್ರತಿಷ್ಟಿತ ಗಣ್ಯ ವ್ಯಕ್ತಿಗಳ ಬಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಜನರ ಮೆಚ್ಚುಗೆಗೂ ಸಹ ಪಾತ್ರರಾಗಿದ್ದಾರೆ. ಅದರ ಜೊತೆಗೆ ಪುನೀತ್ ರಾಜಕುಮಾರ್ ಅವರ ಕುಟುಂಬದ ಭಾವಚಿತ್ರವನ್ನು ಬಿಡಿಸಿ ಅಶ್ವಿನಿ ಅವರಿಗೆ ಭಾವಚಿತ್ರವನ್ನು ನೀಡಿದ್ದಾರೆ.
ರಂಗೋಲಿಯಲ್ಲಿ ಮೂಡಿದ ಪುನೀತ್ ರಾಜಕುಮಾರ್ ಅವರ ಬಾವಚಿತ್ರವನ್ನು ನೋಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಹಾಗೂ ಇದೇ ರೀತಿಯ ಒಳ್ಳೊಳ್ಳೆ ಚಿತ್ರಗಳು ಮೂಡಿ ಬರಲಿ ಎಂದು ಪುನೀತ್ ಕಲಾವಿದರ ತಂಡ ಸಾಧನೆ ಮಟ್ಟಕ್ಕೆ ಹೆರಲಿ ಎಂದು ಶುಭ ಹಾರೈಸಿದ್ದಾರೆ.





