ಮೈಸೂರು: ಇಲ್ಲಿನ ವಿಜಯನಗರದ ಕಲ್ಯಾಣ ಮಂಟಪದಲ್ಲಿಂದು ಹೂಟಗಳ್ಳಿಯ ವಿದ್ಯಾ ಹಾಗೂ ನೆದರ್‌ಲ್ಯಾಂಡ್ ರುಟ್ಗೆರ್ ವಚನ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿದ್ಯಾ ಪೋಷಕರಾದ ಸೋಮಶೇಖರಪ್ಪ ಮತ್ತು ಪ್ರೇಮಾ ಹಾಗೂ ರುಟ್ಗೆರ್ ಪೋಷಕರಾದ ಬಾಬ್‌ವಾನ್ ಬೊ ಇಜೆನ್ ಮತ್ತು ಜಾಕ್ವಿಲಿನ್ ಕನ್ನಡ ಮತ್ತು ಇಂಗ್ಲೀಷಿನಲ್ಲಿ ವಚನಗಳನ್ನು ಸ್ತುತಿಸಿ ವಿವಾಹಕ್ಕೆ ಒಪ್ಪಿಗೆ ನೀಡಿದರು.
ವರ ವಧುವಿಗೆ ಮಾಂಗ್ಯಧಾರಣೆ ಮಾಡಿದರೆ, ವಧು ವರನಿಗೆ ರುದ್ರಾಕ್ಷಿ ಧಾರಣೆ ಮಾಡುವ ಮೂಲಕ ಸಮಾನತೆಯ ತತ್ವಕ್ಕೆ ವಚನ ಮಾಂಗಲ್ಯ ಸಾಕ್ಷಿಯಾಯಿತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪಾ ಕುಮಾರಸ್ವಾಮಿ ವಚನ ಪ್ರತಿಜ್ಞೆ ಬೋಧಿಸಿದರು.