ಮೈಸೂರು: ಶ್ರಾವಣ ಮಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಸುಮಾರು 12 ಸಾವಿರ ಸಾರ್ವಜನಿಕರಿಗೆ ಅವರೆಕಾಳು-ಮುದ್ದೆ ಊಟದ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂಡ್ಯ ಜಿಲ್ಲಾ ನಿವಾಸಿಗಳು, ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಹಾಗೂ ಪುಣ್ಯಕೋಟಿ ಸೇವಾ ಟ್ರಸ್ಟ್ ವತಿಯಿಂದ ಈ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಯೋಗಾನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕರು ಹಾಗೂ ನಾಡೋಜ ಶ್ರೀ ಭಾಷ್ಯಂ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಈ ದಾಸೋಹ ನಡೆಸಲಾಗಿದ್ದು, ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರು ಸಾರ್ವಜನಿಕರಿಗೆ ಊಟ ಬಡಿಡುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.
ಮುದ್ದೆ, ಅವರೆಕಾಳು ಸಾಂಬಾರು ಮತ್ತು ಸಿಹಿ ಪಾಯಸ ದಾಸೋಹದ ವಿಶೇಷವಾಗಿತ್ತು. ದೇವಾಯಲಕ್ಕೆ ಆಗಮಿಸಿದ್ದ ನೂರಾರು ಸಾರ್ವಜನಿಕರು ಮುದ್ದೆ ಹಾಗೂ ಅವರೆಕಾಳು ಸಾಂಬಾರ್ ಸವಿದು ಖುಷಿ ಯೋಗನರಸಿಂಹ ಸ್ವಾಮಿ ಕೃಪೆಗೆ ಪಾತ್ರರಾದರು.