ಮೈಸೂರು: ಮೈಸೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಹುಲಿಯನ್ನು ಪತ್ತೆ ಹಚ್ಚಲು ಕೊಡಗಿನ ದುಬಾರೆ ಆನೆ ಶಿಬಿರದಿಂದ ತರಬೇತಿ ಪಡೆದ ಪ್ರಶಾಂತ್, ಕಂಜನ್, ಹರ್ಷ ಹಾಗೂ ಸುಗ್ರೀವ ಆನೆಗಳನ್ನು ಕರೆತರಲಾಗಿದೆ.
ಡಿಸಿಎಫ್ ಪರಮೇಶ್ ಹಾಗೂ ಆರ್‌ಎಫ್‌ಓ ಸಂತೋಷ್ ಉಗಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ, ಶೂಟರ್‌ಗಳು ಹಾಗೂ ಪಶುವೈದ್ಯರ ತಂಡವು ಸ್ಥಳದಲ್ಲೇ ಬೀಡುಬಿಟ್ಟಿದೆ.





