Mysore
26
overcast clouds

Social Media

ಭಾನುವಾರ, 22 ಮಾರ್ಚ್ 2026
Light
Dark

ಮುಡಾ ಪ್ರಕರಣ ಇಂದಿನಿಂದ ತನಿಖೆ ಶುರು: ಸಿಎಂ ಸಿದ್ದುಗಿಲ್ಲ ಲೋಕಾಯುಕ್ತ ಟೆನ್ಷನ್‌

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಸೆ.27ರಂದು ಎಫ್‌ಐಆರ್‌ ದಾಖಲಾಗಿತ್ತು. ಆದರೆ, ಪ್ರಸ್ತುತ ಇಂದಿನಿಂದ ಅಸಲಿ ತನಿಖೆ ಪ್ರಾರಂಭಿಸಿದ್ದು, ಇದರಿಂದ ಸಿದ್ದರಾಮಯ್ಯ ಅವರಿಗೆ ಸದ್ಯಕ್ಕೆ ಲೋಕಾಯುಕ್ತದಿಂದ ಟೆನ್ಷನ್‌ ಇಲ್ಲದಂತಾಗಿದೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್‌ ನೇತೃತ್ವದ ನಾಲ್ಕು ತನಿಖಾ ತಂಡ ಶನಿವಾರವೇ ಚೆಕ್‌ಲಿಸ್ಟ್‌ ರೆಡಿ ಮಾಡಿಕೊಂಡು ತನಿಖೆಗೆ ಮುಂದಾಗಿದ್ದು, 1935 ರಿಂದ 2021ರವರೆಗೆ ಹಾಗೂ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಬದಲಿ ನಿವೇಶನ ಹಂಚಿಕೆಯಾಗುವರೆಗೂ ಇರುವಂತಹ ಆರಂಭಿಕ ಹಂತದಲ್ಲೇ ದಾಖಲೆ ಸಂಗ್ರಹ ಮಾಡಿಕೊಂಡಿದೆ.

ದಾಖಲೆಗಳನ್ನು 59 ಭಾಗಗಳಾಗಿ ವಿಂಗಡಿಸಲಾಗಿದೆ. ನಂತರ ಕೆಸರೆ ಗ್ರಾಮದ ಸರ್ವೆ ನಂಬರ್‌ 464ರಲ್ಲಿರೋ 3 ಎಕರೆ 16ಗುಂಟೆ ಜಮೀನಿನ ಮೂಲ ದಾಖಲೆ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Tags:
error: Content is protected !!