ಮೈಸೂರು: ಶಿಥಿಲಗೊಂಡ ಕಾರಣ ದುರಸ್ತಿ ಮಾಡುತ್ತಿದ್ದ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಮೃತಪಟ್ಟಿದ್ದಾರೆ.
ಸದ್ದಾಂ ಎಂಬುವವರೇ ಮೃತ ಕಾರ್ಮಿಕನಾಗಿದ್ದಾನೆ. ಮಹಾರಾಣಿ ಕಾಲೇಜು ಕಟ್ಟಡ 80 ವರ್ಷಗಳ ಹಳೆಯದಾಗಿದ್ದು, ಕಳೆದ ತಿಂಗಳು ದುರಸ್ತಿ ಕಾರ್ಯ ಆರಂಭವಾಗಿತ್ತು.
ನಿನ್ನೆ ಸಂಜೆ ಮೇಲ್ಛಾವಣಿ ಕುಸಿದಿದ್ದು, ಸದ್ದಾಂ ಅದರ ಅಡಿ ಸಿಲುಕಿಕೊಂಡಿದ್ದರು. ಬಳಿಕ ರಕ್ಷಣಾ ಕಾರ್ಯಾಚರಣೆ ಮುಂದುವರಿದಿತ್ತು. ಇಂದು ಬೆಳಗಾವಿ ಜಾವ ಸದ್ದಾಂ ಮೃತದೇಹ ಅವಶೇಷಗಳಡಿ ಪತ್ತೆಯಾಗಿದೆ. ಘಟನೆ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.