ಮೈಸೂರು : ಅರಮನೆ ಅಂಗಳವನ್ನು ಪ್ರವೇಶಿಸಿರುವ ದಸರಾ ಗಜಪಡೆಯ ಮೊದಲ ತಂಡದ ಆನೆಗಳು ಸೋಮವಾರ ತುಂತುರು ಮಳೆಯ ನಡುವೆಯೇ ತೂಕ ಪರೀಕ್ಷೆಯ ಬಳಿಕ ಮೊದಲ ದಿನದ ತಾಲೀಮು ನಡೆಸಿ, ಅತಿಥ್ಯದೊಂದಿಗೆ ವಿಶ್ರಾಂತಿಗೆ ಜಾರಿದವು.
ಅರಮನೆಯಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಸಯ್ಯಾಜಿ ರಾವ್ ರಸ್ತೆಯ ನಾಲ್ವಡಿ ವೃತ್ತದ ವರೆಗೆ ತಾಲೀಮು ನಡೆಸಿ ಅರಮನೆಗೆ ಮರಳಿದವು. ಸಂಜೆಯೂ ತಾಲೀಮು ನಡೆಸಲಾಯಿತು. ತುಂತುರು ಮಳೆ ನಡುವೆ ಅರಮನೆಯಿಂದ ಹೊರಗೆ ಬಂದ ಗಜಪಡೆಯನ್ನು ಜನರು ಕಣ್ತುಂಬಿಕೊಂಡರು.
ಗಜ ಮಜ್ಜನ
9 ಆನೆಗಳು ಅರಮನೆಯ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ವಾಸ್ತವ್ಯ ಹೂಡಿದ್ದು, ಎಂದಿನಂತೆ ಅಭಿಮನ್ಯವನ್ನು ಪ್ರತ್ಯೇಕವಾಗಿ ಕಟ್ಟಿಹಾಕಲಾಗಿದೆ. ಮಾತ್ರವಲ್ಲದೆ, ಆನೆಗಳ ಚಲನವಲನಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಗಜಪಡೆಯ ಇರುವ ಕಡೆಗಳಲ್ಲಿ ಸಂಪೂರ್ಣ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.





