Mysore
28
overcast clouds

Social Media

ಬುಧವಾರ, 09 ಜುಲೈ 2025
Light
Dark

ಮೈಸೂರಿನಲ್ಲಿ ಪಾಲಿಕೆ ವತಿಯಿಂದ ಮನೆಗಳಿಗೆ ಬಟ್ಟೆ ಚೀಲಗಳ ವಿತರಣೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ಲಾಸ್ಟಿಕ್‌ ವಿರುದ್ಧ ಹೋರಾಟ ಮುಂದುವರಿದಿದ್ದು, ಪಾಲಿಕೆ ವತಿಯಿಂದ ಮನೆಗಳಿಗೆ ಬಟ್ಟೆ ಚೀಲಗಳನ್ನು ವಿತರಣೆ ಮಾಡಲಾಯಿತು.

ಕರ್ನಾಟಕದಲ್ಲಿ ಏಕ ಬಳಕೆಯ ಪಾಲಿಥಿನ್‌ ಚೀಲಗಳ ಮಾರಾಟವನ್ನು ನಿಷೇಧಿಸಲಾಗಿದ್ದು, ಜನರು ತಮ್ಮ ಮನೆಯಿಂದ ಅಂಗಡಿಗಳಿಗೆ ಬಟ್ಟೆ ಚೀಲಗಳನ್ನು ತೆಗೆದುಕೊಡು ಹೋಗುವಂತೆ ಸರ್ಕಾರ ಸಲಹೆ ನೀಡಿದೆ.

ಆದರೂ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಅಂದರೆ ರೆಸ್ಟೋರೆಂಟ್‌ಗಳು, ಚಹಾ ಅಂಗಡಿಗಳು, ತರಕಾರಿ ಅಂಗಡಿಗಳಲ್ಲಿ ಪಾಲಿಥಿನ್‌ ಚೀಲಗಳನ್ನು ಬಳಸುತ್ತಾರೆ. ಇದನ್ನು ತಡೆಯಲು ಅಧಿಕಾರಿಗಳು ಅನೇಕ ಕ್ರಮ ಕೈಗೊಳ್ಳುತ್ತಿದ್ದು, ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕೂಡ ಮಹಾನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್‌ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದ್ದು, ಪಾಲಿಕೆ ಆಯುಕ್ತ ಆಶಾದ್‌ ಉರ್‌ ರೆಹಮಾನ್‌ ಶರೀಫ್‌ ಅವರು ಪ್ರತೀ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಅಗ್ರಹಾರದ ಆಸುಪಾಸಿನಲ್ಲಿ ಮನೆ ಮನೆಗೆ ತೆರಳಿದ ಮಹಾನಗರ ಪಾಲಿಕೆ ಸಿಬ್ಬಂದಿಗಳು, ಮನೆಗಳಿಗೆ ಬಟ್ಟೆ ಚೀಲಗಳನ್ನು ವಿತರಿಸಿ ಪ್ಲಾಸ್ಟಿಕ್‌ ಬಗ್ಗೆ ಅರಿವು ಮೂಡಿಸಿದರು.

ಪ್ಲಾಸ್ಟಿಕ್‌ ಬಳಕೆಯಿಂದ ಅನೈರ್ಮಲ್ಯ ಉಂಟಾಗುತ್ತದೆ. ಪರಿಸರದ ಮೇಲೂ ಭಾರೀ ಪರಿಣಾಮ ಬೀರಲಿದೆ. ಇದರಿಂದ ರೋಗ ರುಜಿನಗಳು ಹರಡುತ್ತಿದ್ದು, ಇದನ್ನು ತಡೆಗಟ್ಟಲು ಸಾರ್ವಜನಿಕರು ಮುಂದಾಗಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

 

 

Tags:
error: Content is protected !!