Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಮೈಸೂರು | ಉದಯಗಿರಿಗೆ ಹೆಚ್ಚುವರಿ ಠಾಣೆ ಶೀಘ್ರ

ಮೈಸೂರು : ನಗರದ ಉದಯಗಿರಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈ ಪ್ರದೇಶದ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆ ಸ್ಥಾಪಿಸಲು ಅನುಮೋದನೆ ನೀಡಿದೆ.

ನ.೧೮ರಂದು ಗೃಹ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆಯು ಅಸ್ತಿತ್ವದಲ್ಲಿರುವ ಉದಯಗಿರಿ ಪೊಲೀಸ್ ಠಾಣೆಯನ್ನು ಉದಯಗಿರಿ ಉತ್ತರ ಮತ್ತು ಉದಯಗಿರಿ ದಕ್ಷಿಣ ಎಂದು ಎರಡು ಘಟಕಗಳಾಗಿ ವಿಭಜಿಸಲು ನಿರ್ಧರಿಸಿದೆ.

ಪ್ರಸ್ತುತ ಇರುವ ಪೊಲೀಸ್ ಠಾಣೆಯನ್ನು ಉದಯಗಿರಿ ದಕ್ಷಿಣ ಎಂದು ಮರು ನಾಮಕರಣ ಮಾಡಲಾಗುವುದು ಮತ್ತು ಹೊಸದಾಗಿ ರಚಿಸಲಾದ ಘಟಕವನ್ನು ಉದಯಗಿರಿ ಉತ್ತರ ಪೊಲೀಸ್ ಠಾಣೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:-ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ : ಸಿ.ಎಂ

ಸರ್ಕಾರದ ಆದೇಶದ ಪ್ರಕಾರ, ಎರಡೂ ಠಾಣೆಗಳಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ನಾಲ್ವರು ಸಬ್ ಇನ್ಸ್‌ಪೆಕ್ಟರ್‌ಗಳು, ಎಂಟು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು, ೨೪ ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು ೪೮ ಕಾನ್ಸ್‌ಟೇಬಲ್‌ಗಳನ್ನು ನೇಮಿಸಲಾಗುತ್ತದೆ. ಹೆಚ್ಚುವರಿಯಾಗಿ ಉದಯಗಿರಿ ಉತ್ತರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಬಲಪಡಿಸಲು ಇಬ್ಬರು ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳಲಿದೆ.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ರಾಜೀವ್‌ನಗರ ೨ನೇ ಹಂತದ ಗುಪ್ತಾ ಸ್ಟೋರ್ಸ್ ಬಳಿ ಹೊಸ ಠಾಣೆಯನ್ನು ನಿರ್ಮಿಸಲು ಖಾಸಗಿ ಕಟ್ಟಡವನ್ನು ಗುರುತಿಸಿದ್ದಾರೆ. ಬಾಡಿಗೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಕ್ಷಣವೇ ಠಾಣೆಯು ಕಾರ್ಯಾರಂಭ ಮಾಡಲಿದೆ. ಉದಯಗಿರಿಯಲ್ಲಿ ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯವನ್ನು ತನ್ವೀರ್‌ಸೇಠ್ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

Tags:
error: Content is protected !!