Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ಮೈಸೂರು ಮುಡಾದಲ್ಲಿ ಭ್ರಷ್ಟಾಚಾರ: ಆಯುಕ್ತ ದಿನೇಶ್‌ ಕುಮಾರ್‌ ವರ್ಗಾವಣೆ!

ಮೈಸೂರು: ಮೈಸೂರು ನಗರಾಭಿವೃದೀ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತ ದಿನೇಶ್‌ ಕುಮಾರ್‌ ಅವರ ತಲೆ ತಂಡವಾಗಿದೆ.

ಮುಡಾದಲ್ಲಿ 50:50 ಸೈಟು ಹಂಚಿಕೆ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಬಜೆಪಿ ನಾಯಕರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಭೈರತಿ ಸುರೇಶ್‌ ಸೋಮವಾರ ಉನ್ನತಮಟ್ಟದ ಸಭೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, ಮುಡಾ ಆಯುಕ್ತರನ್ನು ವರ್ಗಾವಣೆಗೊಳಿಸಿ ಮೌಖಿಕ ಆದೇಶ ಮಾಡಿರುವುದಾಗಿ ತಿಳಿಸಿದ್ದಾರೆ. ಜತೆಗೆ ಕಾರ್ಯದರ್ಶಿ, ಎಇಇ ಅವರನ್ನು ಕೂಡಾ ವರ್ಗಾವಣೆಗೊಳಿಸಲಾಗಿದೆ. ಇದು ಅಧಿಕಾರಿಗಳ ವಿರುದ್ಧದ ಕ್ರಮವಲ್ಲ ಬದಲಾಗಿ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಇನ್ನು ಈ ಪ್ರಕರಣದ ತನಿಖೆಗೆ ಇಬ್ಬರು ಐಎಎಸ್‌ ಅಧಿಕಾರಿಗಳಾದ ವೆಂಕಟಾಚಲಪತಿ, ಅವಳಗಿ ಹಾಗೂ ನಾಲ್ಕು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ್ತು ಈ ಪ್ರಕರಣ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ಇನ್ನು ಈ ಪ್ರಕರಣ ಮುಗಿಯುವವರೆಗೆ ಮುಂದಿನ ಒಂದು ತಿಂಗಳು ಯಾವುದೇ ಸೈಟು ಹಂಚಿಕೆ ಮಾಡದಂತೆ ಭೈರತಿ ಸುರೇಶ್‌ ಸೂಚಿಸಿದ್ದಾರೆ. ಜತೆಗೆ ಬಿಜೆಪಿ ಅವಧಿಯಲ್ಲಿ ಹಂಚಿಕೆ ಮಾಡಲಾಗಿದ್ದ ಸೈಟುಗಳಿಗೆ ಸ್ಟೇ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Tags: