ಮೈಸೂರು: ಮೈಸೂರು ತಾಲ್ಲೂಕು ಕಚೇರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದಿಢೀರ್ ಭೇಟಿ ನೀಡಿದರು.
ಮೈಸೂರಿನ ಮಿನಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸಗಳಲ್ಲಿ ಲಂಚ, ಭ್ರಷ್ಟಾಚಾರ, ಜನರಿಂದ ಹಣ ಸುಲಿಗೆ ಆರೋಪಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ಕಚೇರಿಗೆ ಸಂಸದ ಯದುವೀರ್ ಒಡೆಯರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ಉಡಾಫೆಯಿಂದ ಕೆಲಸ ಮಾಡುವುದು ಬೇಕಾಗಿಲ್ಲ. ಮೊದಲು ಜನಸಾಮಾನ್ಯರ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಯದೇ ಇರುವುದು ಅಕ್ರಮ ನಡೆಯಲು ಹೆಚ್ಚು ಕಾರಣ. ಅಭಿವೃದ್ಧಿ ಕೆಲಸ ನಡೆಸಲು ಸಾಕಷ್ಟು ತೊಡಕು ಉಂಟಾಗುತ್ತಿದೆ. ಗ್ರೇಟರ್ ಮೈಸೂರು ಮಾಡುವ ನೆಪದಲ್ಲಿ ಚುನಾವಣೆ ಮಾಡುತ್ತಿಲ್ಲ. ಇತ್ತ ಗ್ರೇಟರ್ ಸಭೆಯೂ ಮಾಡುತ್ತಿಲ್ಲ. ಅತ್ತ ಚುನಾವಣೆಯನ್ನೂ ಕೂಡ ಮಾಡುತ್ತಿಲ್ಲ ಎಂದು ಹೇಳಿದರು.




