Mysore
21
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್‌ಸಿ ಎಚ್. ವಿಶ್ವನಾಥ್ ಏಕವಚನದಲ್ಲೇ ವಾಗ್ದಾಳಿ

ಮೈಸೂರು: ವಿಜಯನಗರ ಜಿಲ್ಲಾಧಿಕಾರಿಗೆ ಸಿಎಂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಐಎಎಸ್ ಅಧಿಕಾರಿಗೆ ಏಕವಚನದಲ್ಲಿ ಬೈದು ಅಲ್ಲಿಂದ ಎದ್ದು ಹೋಗು ಎಂದು ಹೇಳಿರುವುದು ಖಂಡನೀಯ. ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಅದಕ್ಕೆ ಅವರ ಪಟಾಲಂಗಳು ಕೇಕೆ ಹಾಕುತ್ತಾರೆ. ದುರಹಂಕಾರದ ನಡೆ ಸರಿಯಲ್ಲ. ಉತ್ತಮ ಆಡಳಿತ ಕೊಟ್ಟು ದುರಹಂಕಾರ ತೋರಿಸಿ. ಇನ್ನು ಮುಂದಾದರೂ ದುರಹಂಕಾರದಿಂದ ನಡೆದುಕೊಳ್ಳೋದನ್ನು ಬಿಡಿ ಎಂದು ಕಿಡಿಕಾರಿದರು.

ಇನ್ನು ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕೋಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಪೂಜೆ ಮಾಡುವ ದೇವರು ಗೋವು. ಅದರ ಕೆಚ್ಚಲು ಕೂಯ್ದಿರುವುದು ಬಹಳ ಖಂಡನೆ. ಸಿದ್ದರಾಮಯ್ಯನವರೇ ನೀವು ಯಾವ ಆಡಳಿತ ಕೊಡ್ತಾ ಇದ್ದೀರಿ.? ಮೈಸೂರು ಮುಡಾ ಪ್ರಕರಣದಲ್ಲಿ ಲೂಟಿ ಮಾಡಿದ್ದ ಆ ಇಬ್ಬರು ಆಯುಕ್ತರನ್ನ ನೀವು ಮುಟ್ಟಲಿಕ್ಕೆ ಆಗಲಿಲ್ಲ. ಅವರ ವಿರುದ್ಧ ಏನು ಕ್ರಮ ತಗೆದುಕೊಂಡ್ರಿ.? ಸಿದ್ದರಾಮಯ್ಯ ಅವರ ಕಾಲದಲ್ಲಿ 1 ಸಾವಿರಕ್ಕೆ ಒಂದು ಸೈಟು. ನಿಮ್ಮ ಯೋಗ್ಯತೆಗೆ ಬೆಂಕಿಹಾಕ, ನಿಮ್ಮ ಆಡಳಿತಕ್ಕೆ ಒಂದಷ್ಟು ಬೆಂಕಿ ಹಾಕ. ಎರಡು ವರ್ಷಗಳು ಕಳಿತಾ ಬರ್ತಿದೆ ರಾಜ್ಯಕ್ಕೆ ಸಿಎಂ ಆಗಿ ಏನ್ ಮಾಡಿದ್ರಿ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!