ಮೈಸೂರು: ಬೆಳಗಾವಿ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಸಿದ್ದರಾಮಯ್ಯ ಕೈ ಎತ್ತಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಸಿಎಂ ನಡೆ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ಮಾಧ್ಯಮಗಳು ತಪ್ಪಾಗಿ ತಿರುಚಿವೆ. ಸಿಎಂ ಅವರು ಪೊಲೀಸ್ ಅಧಿಕಾರಿಯ ಮೇಲೆ ಯಾವುದೇ ರೀತಿಯಲ್ಲೂ ಅನುಚಿತವಾಗಿ ನಡೆದುಕೊಂಡಿಲ್ಲ.
ಇದನ್ನೂ ಓದಿ:- ಸಿಎಂ ಸಿದ್ದರಾಮಯ್ಯ ಏಕೆ ಅಷ್ಟೊಂದು ಉದ್ವೇಗಕ್ಕೆ ಒಳಗಾದರು ಎಂಬುದು ಗೊತ್ತಿಲ್ಲ: ಸಚಿವ ಜಿ.ಪರಮೇಶ್ವರ್
ಸಹಜವಾಗಿ ಒಂದು ಶಿಷ್ಟಾಚಾರ ಸೂಕ್ತ ಭದ್ರತಾ ನಿಯೋಜನೆ ಮಾಡದೆ ಸಮಾವೇಶದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಸಮಾವೇಶಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸುವ ಕೆಲಸವನ್ನ ಮಾಡಿದ್ದರು. ಅದಕ್ಕೆ ಸಿಎಂ ಅವರು ಸಹಜವಾಗಿ ಪೋಲಿಸ್ ಭದ್ರತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.ಕೈ ತೋರಿಸಿ ಪೋಲಿಸ್ ಅಧಿಕಾರಿ ಮೇಲೆ ಸಿಟ್ಟು ತೋರಿಸಿದ್ದಾರೆ. ಕೆಲವು ಮಾಧ್ಯಮಗಳು ಅದನ್ನೇ ತಪ್ಪಾಗಿ ತೋರಿಸಿವೆ. ಆ ಸಂಧರ್ಭದಲ್ಲಿ ಸಹಜವಾಗಿ ಸಿಎಂ ಪ್ರತಿಕ್ರಿಯಿಸಿದ್ದಾರೆ. ಅದೇ ಜಾಗದಲ್ಲಿ ಯಾರೇ ಇದ್ದರೂ ಅದನ್ನೇ ಮಾಡುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.





