ಮೈಸೂರು: ಹನಿಟ್ರ್ಯಾಪ್ ಹಾಗೂ ಕೊಲೆ ಸುಪಾರಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಸಚಿವ ರಾಜಣ್ಣ ಅವರ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಹಾಗೂ ಕೊಲೆ ಸಂಚು ಸಂಬಂಧಪಟ್ಟಂತೆ ನಾವು ಈಗಾಗಲೆ ದೂರು ನೀಡಿದ್ದೇವೆ. ಯಾರು ನಮ್ಮನ್ನು ಟಾರ್ಗೆಟ್ ಮಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆರಂಭದಲ್ಲಿ ಇದು ತಮಾಷೆ ಅನ್ನಿಸಿತ್ತು. ಆದರೆ ಹನಿಟ್ರ್ಯಾಪ್ ನಂತರ ಈ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಂಡು ದೂರು ನೀಡಿದ್ದೇವೆ. ಆಡಿಯೋ ಅನುಸರಿಸಿ ಕೆಲವರನ್ನು ಬಂಧಿಸಲಾಗಿದೆ. ಸಿಐಡಿ ತನಿಖೆಯ ನಂತರ ಎಲ್ಲ ಹೊರಬರಲಿದೆ ಎಂದು ಹೇಳಿದರು.
ಈ ಪ್ರಕರಣದ ಹಿಂದೆ ಯಾವ ಮಹಾನಾಯಕ ಇದ್ದಾರೆ ಎನ್ನುವುದು ಗೊತ್ತಿಲ್ಲ. ಮೀಡಿಯಾದವರೇ ಮಹಾನಾಯಕ ಅಂತ ಹೆಸರು ಕೊಟ್ಟಿರೋದು. ನೀವೆ ಯಾರು ಅಂತ ಹೇಳಿ. ಈ ಪಿತೂರಿಯಿಂದ ಯಾರೇ ಇದ್ದರೂ ಒಳ್ಳೆಯದಾಗಲ್ಲ ಎಂದು ತಿಳಿಸಿದರು.





