Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಯಾರಿಗೂ ತೊಂದರೆ ಆಗದಂತೆ ಮಹಿಷ ದಸರಾ ಆಚರಣೆ ಮಾಡಿಕೊಳ್ಳಬಹುದು: ಸಚಿವ ಎಚ್.ಸಿ.ಮಹದೇವಪ್ಪ

ಮೈಸೂರು: ಯಾರಿಗೂ ತೊಂದರೆ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಕೆಲ ಪ್ರಗತಿಪರ ಸಂಘಟನೆಗಳು ನಾಳೆ ಹಮ್ಮಿಕೊಂಡಿರುವ ಮಹಿಷ ದಸರಾ ಆಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಚ್.ಸಿ.ಮಹದೇವಪ್ಪ ಅವರು, ಕಾರ್ಯಕ್ರಮ ಮಾಡುವವರು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಇಂಥದ್ದನ್ನು ಮಾಡಿ, ಮಾಡಬೇಡಿ ಎಂದು ಹೇಳಲು ನಾವ್ಯಾರು? ದೇಶದ ನಾಗರಿಕತೆಯಲ್ಲಿ ಎಲ್ಲವನ್ನೂ ಪೂಜಿಸುವ ಸಂಸ್ಕೃತಿ ಇದೆ. ಅವರವರ ಧಾರ್ಮಿಕ ನಂಬಿಕೆ ಅವರದ್ದು. ಅದನ್ನು ವಿರೋಧಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಅವರು ಯಾರಿಗೂ ತೊಂದರೆ ಆಗದಂತೆ ನೋಡಿಕೊಂಡು ಕಾರ್ಯಕ್ರಮ ಮಾಡಲಿ ಎಂದರು.

 

Tags: