Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಸಂಸದರಾದ ಮೇಲೆ ಟಾರ್ಗೆಟ್‌ ಮಾಡಲಾಗುತ್ತಿದೆ: ಸಂಸದ ಯದುವೀರ್‌ ಹೇಳಿಕೆಗೆ ಶಾಸಕ ಕೆ.ಹರೀಶ್‌ ಗೌಡ ತಿರುಗೇಟು

ಮೈಸೂರು: ಸಂಸದರಾದ ಮೇಲೆ ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬ ಸಂಸದ ಯದುವೀರ್‌ ಅವರ ಹೇಳಿಕೆಗೆ ಶಾಸಕ ಕೆ.ಹರೀಶ್‌ ಗೌಡ ತಿರುಗೇಟು ನೀಡಿದ್ದಾರೆ.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಈ ಕುರಿತು ಇಂದು(ಡಿಸೆಂಬರ್‌.27) ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಯದುವೀರ್‌ ಅವರಿಗೆ ಬಹುಶಃ ಭ್ರಮೆ ಇರಬೇಕು. ಲೋಕಸಭಾ ಸಂಸದ ಚುನಾವಣೆಗೆ ನಮ್ಮ ಪಕ್ಷದಿಂದ ಎಂ.ಲಕ್ಷ್ಮಣ್‌ ಅವರು ಹಾಗೂ ಅವರು ಸ್ಪರ್ಧಿಸಿದ್ದರು. ಚುನಾವಣೆ ಫಲಿತಾಂಶ ಬಂದ ಬಳಿಕ ಲಕ್ಷ್ಮಣ್‌ ಸೋತಿದ್ದು, ಯದುವೀರ್‌ ಗೆದ್ದಿದ್ದಾರೆ. ಅದನ್ನು ನಮ್ಮ ಪಕ್ಷ ಒಪ್ಪಿಕೊಂಡಿದೆ, ಆದರೆ ನಾವು ಯಾರ ವಿರುದ್ಧವೂ ಷ್ಯಡಂತ್ರವನ್ನು ಮಾಡಿಲ್ಲ. ಅವರಿಗೆ ಹಾಗೇ ಅನ್ನಿಸುತ್ತಿದೆ ಎಂದರೆ ಅದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಯಾಕೆ ಅವರನ್ನು ಟಾರ್ಗೆಟ್‌ ಮಾಡುತ್ತೇವೆ. ಯದುವೀರ್‌ಗೆ ನಮ್ಮ ಪಕ್ಷ ಟಾರ್ಗೆಟ್‌ ಮಾಡುತ್ತಿದೆ ಎಂದು ಅನಿಸಿದರೆ, ಅದನ್ನು ಅವರ ಹತ್ತಿರವೇ ಪ್ರಶ್ನಿಸಿ. ನಮಗೆ ಯದುವಂಶದ ಮೇಲೆ ಅಪಾರ ಗೌರವವಿದೆ. ಅವರನ್ನು ಟಾರ್ಗೆಟ್‌ ಮಾಡಿ ನಾವು ಏನ್ನನ್ನೂ ಸಾಧಿಸಬೇಕಾಗಿಲ್ಲ. ಇನ್ನೂ ಹೇಳಬೇಕೆಂದರೆ ಅವರ ಪಕ್ಷದವರೇ ಅವರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಅವರನ್ನೇ ಹೋಗಿ ಕೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅಭಿವೃದ್ಧಿಯ ಹರಿಕಾರ

ಇನ್ನು ಇದೇ ಸಂದರ್ಭದಲ್ಲಿ ಪ್ರಿನ್ಸೆಸ್‌ ರಸ್ತೆಗೆ(ಕೆಆರ್‌ಎಸ್‌) ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡಲು ಬಿಜೆಪಿ ವಿರೋಧಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರು ಮಹಾತ್ಮ ಗಾಂಧೀಜಿ ಅವರನ್ನೇ ಒಪ್ಪಲಿಲ್ಲ. ಆ ಪಕ್ಷದವರಿಗೆ ನಾಧುರಾಮ್‌ ಗೂಡ್ಸೆಯನ್ನು ಮಹಾತ್ಮ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಹೆಸರಿಡಲು ಪಕ್ಷದ ರಾಜಕಾರಣ ಮಾಡಬಾರದು. ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿ, 14 ಸಲ ಹಣಕಾಸು ಬಜೆಟ್‌ ಮಂಡಿಸಿದ್ದಾರೆ. ಅಲ್ಲದೇ, ಮೈಸೂರಿಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿ ಮೈಸೂರು ಜಿಲ್ಲೆ ಹಾಗೂ ನಗರಕ್ಕೆ ಅಪಾರವಾದ ಕೊಡುಗೆ ನೀಡಿದವರು ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಪ್ರಿನ್ಸೆಸ್‌ ರಸ್ತೆರಯಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ , ಆಯುರ್ವೇದ ಆಸ್ಪತ್ರೆ, ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಕಿದ್ವಾಯಿ ಹಾಗೂ ಚರಕ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳನ್ನು ಮೈಸೂರಿಗೆ ನೀಡಿದ್ದಾರೆ. ಜೊತೆಗೆ ಜಿಲ್ಲಾ ಆಸ್ಪತ್ರೆಗೆ ನೂರು ಡಯಾಲಿಸೀಸ್ ಮತ್ತು ಬೆಡ್‌ಗಳನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಈ ಎಲ್ಲಾ ಆಸ್ಪತ್ರೆಗಳು ಒಂದೇ ರಸ್ತೆಯಲ್ಲಿಯೇ ಇವೆ. ಮೈಸೂರು ನಗರಕ್ಕೆ
ಇಷ್ಟೆಲ್ಲಾ ಕೊಡುಗೆ ಕೊಟ್ಟಿರುವ ಅಭಿವೃದ್ಧಿಯ ಹರಿಕಾರ ಸಿದ್ದರಾಮಯ್ಯ ಅವರ ಹೆಸರಿಡಲು ವಿರೋಧಿಸುವುದು ಪ್ರತಿಭಟಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Tags:
error: Content is protected !!