ಮೈಸೂರು: ಕಮರ್ಷಿಯಲ್ ಟ್ಯಾಕ್ಸ್ ವಿಚಾರದಲ್ಲಿ ಜನರಿಗೆ ಸತ್ಯಾ-ಸತ್ಯತೆ ತಿಳಿಸಲು ಮುಂದಾಗಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾತನಾಡಿದ ಅವರು, GST ಕಚೇರಿಗೆ ಬಂದಿದ್ದೇವೆ. ಕಳೆದ ಒಂದು ವಾರದಿಂದ ಸಣ್ಣ ವ್ಯಾಪಾರಸ್ಥರಿಗೆ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್‌ನಿಂದ ನೊಟೀಸ್ ಬರ್ತಿದೆ. GST ಇಲಾಖೆಯವರೇ ಈ ಕೆಲಸ ಮಾಡ್ತಿದ್ದಾರೆ. ಕೆಲವರು ಈ ವಿಚಾರದಲ್ಲಿ ತಪ್ಪು ಮಾಹಿತಿ ಕೊಡ್ತಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ರೆ ಸರಿಯಾದ ಮಾಹಿತಿ ಕೊಡಬೇಕು. ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಕರ್ನಾಟಕ ರಾಜ್ಯ ಸರ್ಕಾರದ ಮಾನದಂಡ ಅನುಸರಿಸುವುದಿಲ್ಲ. ಕೇಂದ್ರ ಸರ್ಕಾರದ ಮಾನದಂಡ ಅನುಸರಿಸುತ್ತದೆ. ಸಣ್ಣ ವ್ಯಾಪಾರಿಗಳಿಗೆ GST ಹಾಕಿರೋದು ರಾಜ್ಯ ಸರ್ಕಾರ ಅಲ್ಲ, ಕೇಂದ್ರ ಸರ್ಕಾರ. ರಾಜ್ಯ ಸರ್ಕಾರದ ವ್ಯಾಪ್ತಿಗೆ GST ಬರೋದಿಲ್ಲ. ಈ ಹಿಂದೆ ಪಾರ್ಲಿಮೆಂಟ್‌ನಲ್ಲಿ ರಾಹುಲ್ ಗಾಂಧಿ ಅವರು ಇದನ್ನೇ ಹೇಳಿದ್ದರು. GST ತಂದು ಜನ ಸಾಮಾನ್ಯರ ಬಳಿ ಪಿಕ್ ಪ್ಯಾಕೇಟ್ ಮಾಡಿದ್ದಾರೆ ಎಂದು ಹೇಳಿದ್ದರು. ಅದು ಇವಾಗ ನಿಜವಾಗಿದೆ. ಇಂದು ವಸ್ತುಗಳಿಗೆ 7 ಬಾರಿ ಟ್ಯಾಕ್ಸ್ ಬೀಳುತ್ತಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ಮೋದಿ ಅವರಿಗೆ ಮಾನ ಮರ್ಯಾದೆ ಇದ್ರೆ ಇದಕ್ಕೆ ಸ್ಪಷ್ಟನೆ ಕೊಡಿ. ಸಣ್ಣ ವ್ಯಾಪಾರಿಗಳಿಗೆ ಬರೆ ಎಳೆಯುವ ಕೆಲಸ ಮಾಡಬೇಡಿ. ಬಿಜೆಪಿ ನಾಯಕರು ಮಿಸ್ ಲೀಡ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಣ್ಣ ವ್ಯಾಪಾರಿಗಳು ನಾಳೆ ನಡೆಸುವ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷದವರು ಕೂಡ ಬೆಂಬಲ ನೀಡಲಿದ್ದೇವೆ.
ದಯಮಾಡಿ ಪ್ರತಿಭಟನೆ ಮಾಡಿ ನಾನು ನಿಮಗೆ ಸಹಕಾರ ನೀಡುತ್ತೇವೆ. ರಾಜ್ಯ ಸರಕಾರ ಟ್ಯಾಕ್ಸ್ ಹಾಕುತ್ತಿಲ್ಲ ಕೇಂದ್ರ ಸರಕಾರ ಮಾಡಿರುವ ಕೆಲಸಕ್ಕೆ ಪ್ರತಿಭಟನೆ ಮಾಡಿ ಎಂದು ಹೇಳಿದರು.





