ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಎನ್‌ಐಎ ತನಿಖೆಗೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಲಿಂಡರ್ ಬ್ಲಾಸ್ಟ್‌ನಲ್ಲಿ ಮೂರು ಅಮಾಯಕ ಜೀವಗಳು ಬಲಿಯಾಗಿರುವುದು ನೋವಿನ ಸಂಗತಿ. ಘಟನೆ ಬಗ್ಗೆ ಸಂಶಯವಿದೆ. ಉತ್ತರ ಪ್ರದೇಶದ ಸಲೀಮ್ ಹೀಲಿಯಂ ಗ್ಯಾಸ್ ಬಲೂನ್ ಮಾರಾಟಗಾರರೆಂದು ಹೇಳಿಕೊಂಡಿದ್ದನು. ಸಲೀಮ್ ಸೇರಿದಂತೆ ನಾಲ್ವರು ಲಾಡ್ಜ್‌ನ ಒಂದೇ ಕೊಠಡಿಯಲ್ಲಿ ತಂಗಿದ್ದರೆಂದು ಪೊಲೀಸರು ಹೇಳುತ್ತಿದ್ದಾರೆ. ಅವರು ಉತ್ತರ ಪ್ರದೇಶದವರೇನಾ? ಅಥವಾ ಬೇರೆ ಕಡೆಯವರಾ? ಎಂಬುದನ್ನು ಧೃಡಪಡಿಸಬೇಕಿದೆ. ಕರ್ನಾಟಕ ಪೊಲೀಸರು ಯೋಗ್ಯವಾದ ರಿಸಲ್ಟ್ ನೀಡಲ್ಲ. ಹೀಗಾಗಿ ತನಿಖೆಯನ್ನು ಎನ್‌ಐಎಗೆ ವಹಿಸುವುದು ಸೂಕ್ತ ಎಂದು ಆಗ್ರಹಿಸಿದರು.





