Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ರಾಹುಲ್‌ ಗಾಂಧಿ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ಕೆಂಡಾಮಂಡಲ

prathap simha

ಮೈಸೂರು: ಡಿಗ್ರಿ, ಮಾಸ್ಟರ್‌ ಡಿಗ್ರಿ ಹಾಗೂ ಓದುವ ಹವ್ಯಾಸ ಇದ್ದರೆ ಮಾತ್ರ ಜ್ಞಾನ ಬರುತ್ತದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್‌ ಸಿಂಧೂರ್‌ ವೇಳೆ ನಮ್ಮ ವಿಮಾನ ಎಷ್ಟು ನಾಶವಾಗಿವೆ ಎಂಬ ರಾಹುಲ್‌ ಗಾಂಧಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್‌ ಸಿಂಹ ಅವರು, 56 ದೇಶಗಳ ಪೈಕಿ ಎಷ್ಟು ದೇಶಗಳು ಭಾರತಕ್ಕೆ ಬೆಂಬಲ ನೀಡಿವೆ ಎಂದು ಕಾಂಗ್ರೆಸ್‌ನವರಿಗೆ ಗೊತ್ತಾ ಎಂದು ಪ್ರಶ್ನಿಸಿದ ಅವರು, ಡಿಗ್ರಿ,‌ ಮಾಸ್ಟರ್‌ಡಿಗ್ರಿ, ಓದುವ ಹವ್ಯಾಸ ಇದ್ರೆ ಎಲ್ಲರಿಗೂ ಜ್ಞಾನ ಇರುತ್ತದೆ. ಆದ್ರೆ, ಅವರಿಗೆ ಇದೆಲ್ಲ‌ ಎಲ್ಲಿಂದ ಬರುತ್ತೆ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:- ಪಾಕಿಸ್ತಾನದ ರಾಷ್ಟ್ರಪಿತ ಇಂಡಿಯನ್ ನ್ಯಾಷನಲ್‌ ಕಾಂಗ್ರೆಸ್: ಮಾಜಿ ಸಂಸದ ಪ್ರತಾಪ್‌ ಸಿಂಹ

ಇನ್ನು ರಾಹುಲ್ ಗಾಂಧಿ ನಡತೆ ನೋಡಿದರೆ ನನಗೆ ಗೊತ್ತಾಗುತ್ತಿಲ್ಲ. ಡೋಕ್ಲಾಮ್ ಘಟನೆ ಆದಾಗಲೂ ವಿವರಣೆ ಕೇಳಿದ್ರಿ. ಆಪರೇಷನ್ ಸಿಂಧೂರ್ ಯಶಸ್ವಿಯಾಗಿರುವಾಗ ಈ‌ ಥರ ಮಾತನಾಡುವುದು ಎಷ್ಟು‌ ಸರಿ? ಈ ಆಪರೇಷನ್ ಸಿಂಧೂರ್‌ ವೇಳೆ ನಮ್ಮದು ಎಷ್ಟು‌ ವಿಮಾನ ಹೋಗಿದೆ? ನೀವೇನು ಚೈನೀಸ್ ಏಜೆಂಟಾ? ಪಾಕಿಸ್ತಾನದ ಏಜೆಂಟಾ? ಜ್ಯೋತಿ ಮಲ್ಹೋತ್ರಾ ಥರ ನೀವು ಆಗಿದ್ದೀರಾ ಎಂದು ಕಿಡಿಕಾರಿದರು.

Tags:
error: Content is protected !!