Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮಾಜಿ ಶಾಸಕ ಎಲ್.ನಾಗೇಂದ್ರ ಗಂಭೀರ ಆರೋಪ

ಮೈಸೂರು: ಮುಡಾ ಹಗರಣದಲ್ಲಿ ಸಚಿವ ಭೈರತಿ ಸುರೇಶ್‌ ಕೈವಾಡವಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಶಾಸಕ ಎಲ್.ನಾಗೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಇಷ್ಟೊಂದು ದೊಡ್ಡ ಹಗರಣವಾಗಿದ್ದರೂ ಮಾಜಿ ಆಯುಕ್ತರ ವಿರುದ್ಧ ಕ್ರಮ ಏಕೆ ಆಗಿಲ್ಲ ಎಂದು ಪ್ರಶ್ನೆ ಮಾಡಿದರು.

ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಪಡುವಾರಹಳ್ಳಿ ನಾಗರಾಜುಗೆ 53 ಸೈಟ್‌ ನೀಡಿರುವುದೇ ಕಾರಣ ಎಂದು ಆರೋಪ ಮಾಡಿದರು.

ಮುಡಾದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಅಮಾಯಕನಿಗೆ ಸೈಟ್‌ ಇರುವುದೇ ಗೊತ್ತಿಲ್ಲ. ಚಾಮುಂಡೇಶ್ವರಿ ಸೌಹಾರ್ದ ಸಮಿತಿಯ 48 ಸೈಟ್‌ ವಾಪಸ್‌ ಪಡೆದಿದ್ದಾರೆ. ಸಿಎಂ ಪತ್ನಿ 14 ಸೈಟ್‌ ನೀಡಿದ್ದಾರೆ. ಉಳಿದ ಸೈಟ್‌ಗಳ ವಾಪಸ್ಸಾತಿ ಯಾವಾಗ ಎಂದು ಪ್ರಶ್ನೆ ಮಾಡಿದರು.

928 ಸೈಟ್‌ಗಳ ವರದಿ ಈಗಾಗಲೇ ಬಂದಿದೆ. ಯಾಕೆ ಇನ್ನು 928 ಸೈಟ್‌ಗಳನ್ನು ವಾಪಸ್‌ ಪಡೆದುಕೊಂಡಿಲ್ಲ. ಒಬ್ಬೊಬ್ಬರ ಹೆಸರಿನಲ್ಲಿ ಹಲವು ಸೈಟ್‌ಗಳನ್ನು ನೀಡಲಾಗಿದೆ. ಕೇವಲ 48 ಸೈಟ್‌ಗಳನ್ನು ರದ್ದು ಮಾಡಿ ಸತ್ಯ ಸಂತರು ಎಂದು ಹೇಳಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

 

Tags: