Mysore
25
haze

Social Media

ಸೋಮವಾರ, 17 ನವೆಂಬರ್ 2025
Light
Dark

ಹಣಕಾಸಿನ ವಿಚಾರ| ಬಾವನಿಂದ ಬಾಮೈದುನನ ಕೊಲೆ; ಮೈಸೂರಿನ ಬಾರ್‌ನಲ್ಲಿ ಘಟನ್

ಮೈಸೂರು: ಮದ್ಯದ ಅಮಲಿನಲ್ಲಿ ಬಾಮೈದನನ್ನೇ ಭಾವ ಕೊಚ್ಚಿ ಕೊಲೆಗೈದ ಘಟನೆ ನಗರದ ಮೇಟಗಳ್ಳಿಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಈಡಿಗರ ಬೀದಿ ನಿವಾಸಿ ಮನೋಜ್ ( 26) ಹತ್ಯೆಯಾದ ವ್ಯಕ್ತಿ. ವಿನೋದ್ ಬಾಮೈದನನ್ನ ಕೊಲೆಗೈದ ಬಾವ.

ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. ಮನೋಜ್ ಎಣ್ಣೆ ಹೊಡೆದುಕೊಂಡು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಮನೋಜ್ ಉಪಟಳ ತಾಳಲಾರದೆ, ಟ್ರೂ ಸ್ಪಿರಿಟ್ ಬಾರ್ ನಲ್ಲಿ ಎಣ್ಣೆ ಹೊಡೆದು ಗಲಾಟೆ ನಡೆದ ನಂತರ ವಿನೋದ್ ಕೃತ್ಯವೆಸಗಿದ್ದಾನೆ.

ಬಾರ್‌ನಲ್ಲಿ ರೂಮ್ ಬಾಡಿಗೆ ಪಡೆದು ಜೊತೆಯಲ್ಲೆ ಎಣ್ಣೆ ಹೊಡೆದಿದ್ದರು. ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿದ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಬಾವ ವಿನೋದ್ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಎಫ್‌ಎಸ್ ಎಲ್ ತಂಡದ ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮೇಟಗಳ್ಳಿ ಪೊಲೀಸರು ವಿನೋಧ್‌ಗೆ ಬಲೆ ಬೀಸಿದ್ದಾರೆ.

Tags:
error: Content is protected !!