Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ತಾಯಿ ಭಾಗ್ಯಲಕ್ಷ್ಮೀ ನಿಧನ

pass away bhagyalakshmi

ಮೈಸೂರು: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅವರ ತಾಯಿ ಭಾಗ್ಯಲಕ್ಷ್ಮೀ ಅವರಿಂದು ನಿಧನರಾಗಿದ್ದಾರೆ.

ಮೈಸೂರಿನ ಕುವೆಂಪುನಗರದಲ್ಲಿ ವಾಸವಾಗಿದ್ದ ಭಾಗ್ಯಲಕ್ಷ್ಮೀ ಅವರು ತಮ್ಮ ಪತಿ ಜೆ.ಕೆ.ಚಂದ್ರಶೇಖರ್‌ರೊಂದಿಗೆ ಸರಳ ಜೀವನ ನಡೆಸಿದ್ದರು. 2018ರಲ್ಲಿ ಚಂದ್ರಶೇಖರ್‌ ನಿಧನದ ನಂತರ ಭಾಗ್ಯಲಕ್ಷ್ಮೀ ಅವರು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ತಮ್ಮ ಮಕ್ಕಳಾದ ಜಾವಗಲ್‌ ಶ್ರೀನಾಥ್‌, ಜೆ.ಸಿ.ಶ್ರೀಲಕ್ಷ್ಮೀ, ಜೆ.ಸಿ.ಶ್ರೀಲತಾ ಅವರನ್ನು ಉತ್ತಮ ಮೌಲ್ಯಗಳೊಂದಿಗೆ ಬೆಳೆಸಿದ್ದರು.

ಕಳೆದ ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ ತಡರಾತ್ರಿ ನಿಧನರಾಗಿದ್ದಾರೆ. ಭಾಗ್ಯಲಕ್ಷ್ಮೀ ಅವರ ನಿಧನದಿಂದ ಜಾವಗಲ್‌ ಶ್ರೀನಾಥ್‌ ಕುಟುಂಬ ದುಃಖದ ಸಾಗರದಲ್ಲಿ ಮುಳುಗಿದೆ.

Tags:
error: Content is protected !!