ಮೈಸೂರು: ನಾಡಹಬ್ಬ ದಸರಾ ನೋಡಲು ಬಂದವರು ಈ ಡಬಲ್ ಡೆಕ್ಕರ್ ಅಂಬಾರಿಯನ್ನ ಮರೆಯಬೇಡಿ. ಯಾರು ಬೇಕಾದ್ರೂ ಈ ಅಂಬಾರಿಯಲ್ಲಿ ಕುಳಿತು ನಗರದ ಆಕರ್ಷಕ ದೀಪಾಲಂಕಾರ ನೋಡಬಹುದು. ಪ್ರವಾಸೋದ್ಯಮ ಇಲಾಖೆಯೂ ಪ್ರವಾಸಿಗರ ಗಮನವನ್ನು ಸೆಳೆಯುವ ಉದ್ದೇಶವಾಗಿ ಈ ವಿಶೇಷ ಬಸ್ ಸೇವೆಯನ್ನು ಒದಗಿಸುತ್ತಿದ್ದು, ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಈ ಅಂಬಾರಿ ಬಸ್‌ನಲ್ಲಿ ಪ್ರಯಾಣಿಸಲು ದರ ನಿಗದಿ ಪಡಿಸಲಾಗಿದ್ದು, ಹಪ್ಪರ್ ಡೆಕ್‌ನಲ್ಲಿ ಪ್ರಯಾಣಿಸಲು 500 ರೂ., ಲೋವರ್ ಡೆಕ್‌ನಲ್ಲಿ ಪ್ರಯಾಣಿಸಲು 250 ರೂ.ಗಳನ್ನು ನಿಗಧಿಪಡಿಸಿದೆ. ಅಂಬಾರಿ ಬಸ್‌ನ ಪ್ರಯಾಣದ ಅವಧಿ 1 ಗಂಟೆಯಾಗಿದ್ದು, ಸಂಜೆ 6, ರಾತ್ರಿ 8 ಹಾಗೂ 9.30 ರವರೆಗೆ ಈ ಬಸ್‌ಗಳು ಸಂಚರಿಸಲಿವೆ.
ಅಂಬಾರಿ ಡೆಕ್ಕರ್ ಬಸ್ ಸಂಚರಿಸುವ ಮಾರ್ಗ
ಹೋಟೆಲ್ ಮಯೂರ ಹೊಯ್ಸಳದಿಂದ ಬಸ್‌ಗಳು ಹೊರಡಲಿದ್ದು, ಹಳೇ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಂಡ ಸರ್ಕಲ್ ಗೇಟ್, ಹಾರ್ಡಿಂಗ್ ಸರ್ಕಲ್, ಕೆಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ವೈಧ್ಯಕೀಯ ಕಾಲೇಜು ಹಾಗೂ ರೈಲ್ವೆ ನಿಲ್ದಾಣದ ಮೂಲಕ ಹೊಯ್ಸಳ ಹೋಟೆಲ್‌ಗೆ ಬಂದು ತಲುಪಲಿದೆ.