Mysore
23
overcast clouds
Light
Dark

ಗೌರಿ-ಗಣೇಶ ಹಬ್ಬ ಆಚರಣೆಗೆ ಅನವಶ್ಯಕ ನಿರ್ಬಂಧ ಹೇರಬೇಡಿ: ಶಾಸಕ ಶ್ರೀವತ್ಸ ಮನವಿ

ಮೈಸೂರು: ಈ ಬಾರಿ ವಿಜೃಂಭಣೆಯಿಂದ ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಅನುಮತಿ ಕೊಡಿ, ಯಾವುದೇ ಅನವಶ್ಯಕ ನಿರ್ಬಂಧ ಹೇರಬೇಡಿ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಮನವಿ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬದ ಆಚರಣೆಗೆ ಅನವಶ್ಯಕ ನಿರ್ಬಂಧ ಹೇರಬಾರದು. ನಮ್ಮ ಹಬ್ಬ ನಮ್ಮ ನಂಬಿಕೆ. ಹಾಗಾಗಿ ಹಬ್ಬ ಆಚರಣೆಗೆ ಯಾವುದೇ ನಿರ್ಬಂಧ ಹಾಕಬಾರದು. ಎಲ್ಲದಕ್ಕೂ ಅನುಮತಿ ಪಡೆಯಬೇಕು ಎಂಬ ಕಟ್ಟಾಜ್ಞೆ ಬೇಡ. ವಿದ್ಯುತ್‌ ಸಂಪರ್ಕವನ್ನು ಅಕ್ರಮವಾಗಿ ತೆಗೆದುಕೊಳ್ಳಬಾರದು. ಅದಕ್ಕೆ ಅನುಮತಿ ಪಡೆದು ಹಬ್ಬ ಆಚರಿಸಿ. ಪೊಲೀಸರು ಯಾವುದಾದರೂ ಸಮಸ್ಯೆ ಒಡ್ಡಿದರೆ ಜನರ ಪರವಾಗಿ ನಾನೇ ನಿಲ್ಲುತ್ತೇನೆ. ಬೇರೆಯವರಿಗಿಲ್ಲದ ನಿರ್ಬಂಧ ನಮಗೇಕೆ ಎಂದು ಪ್ರಶ್ನೆ ಮಾಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಗೌರಿ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ವಿಧಿಸಿರುವ ನಿರ್ಬಂಧಗಳನ್ನು ತೆರವು ಮಾಡುವಂತೆ ಆಗ್ರಹಿಸಿ ಸಂಜೆ ಪೊಲೀಸ್‌ ಕಮಿಷನರ್‌ ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.