ಮೈಸೂರು: ಚಾಮುಂಡಿಬೆಟ್ಟಕ್ಕೆ ಬೆಂಕಿಬಿದ್ದ ವೇಳೆ ನೀರು ಕೊಡಲು ನಿರಾಕರಿಸಿದ್ದಕ್ಕೆ ಕಾರಣ ಕೇಳಿ ಮಾಲ್ ಆಫ್ ಮೈಸೂರು ಹೋಟೆಲ್‌ಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ನೋಟಿಸ್ ನೀಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಹಬ್ಬಿದ್ದ ಬೆಂಕಿ ನಂದಿಸಲು ನೀರು ಕೊಡಿ ಎಂದು ಅಂಗಲಾಚಿದರೂ ನೀರು ನೀಡಿಲ್ಲ. ತುರ್ತು ಪರಿಸ್ಥಿತಿಯಲ್ಲಿಯೂ ನೀರು ಕೊಡಲು ನಿರಾಕರಿಸಿದ್ದಕ್ಕಾಗಿ ಕಾರಣ ಕೇಳಿ ಮಾಲ್ ಆಫ್ ಮೈಸೂರು ವೈಸ್ ಪ್ರೆಸಿಡೆಂಟ್ ಸಂದೀಪ್‌ಗೆ ನೋಟಿಸ್ ಜಾರಿಮಾಡಿದ್ದಾರೆ.
ವಿಪತ್ತು ಸಂದರ್ಭಗಳಲ್ಲಿ ನೀರು ಕೊಡದೇ ಇರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿಪತ್ತು ನಿರ್ವಹಣೆ ಕಾಯ್ದೆ 2005ರಡಿ ವಿಪತ್ತುಗಳಿಗೆ ಪೂರಕವಾಗಿ ಸ್ಪಂದಿಸಲು ಮಾಲ್ ಆಫ್ ಮೈಸೂರಿನ ಆಡಳಿತ ಮಂಡಳಿಗೆ ಸೂಚನೆ ನೀಡಿ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿಗೆ ಕೋರಿದ್ದಾರೆ.
ವಿಪತ್ತು ನಿರ್ವಹಣೆ ಸಮಯದಲ್ಲಿ ಆಗತ್ಯತೆಯನ್ನು ಪೂರೈಸದಿದ್ದರೆ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಈ ಬಗ್ಗೆ ನೋಟಿಸ್ ಪಡೆದ ಮೂರು ದಿನಗಳಲ್ಲಿ ಸಮಜಾಯಿಸಿ ನೀಡಬೇಕು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.





