Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ದಸರಾ ಗಜಪಡೆ ಮಾವುತ ಹಾಗೂ ಕಾವಾಡಿಗಳ ಕುಟುಂಬದ ಮಹಿಳೆಯರಿಗೆ ಬಾಗಿನ ವಿತರಣೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿರುವ ದಸರಾ ಗಜಪಡೆ ಮಾವುತರು ಹಾಗೂ ಕಾವಾಡಿಗರ ಕುಟುಂಬದ ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು.

ಅರಮನೆ ಆವರಣದಲ್ಲಿ ಮಾವುತರು ಹಾಗೂ ಕಾವಾಡಿಗರ ಕುಟುಂಬದ ಮಹಿಳೆಯರಿಗೆ ಶ್ರೀ ದುರ್ಗಾ ಫೌಂಡೇಶನ್‌ ಹಾಗೂ ಡಾ.ಎಂ.ಶಾಂತ ರಾಮಕೃಷ್ಣ ಅಭಿಮಾನಿ ಬಳಗದ ಸದಸ್ಯರು ಅರಿಶಿನ ಕುಂಕುಮ, ವೀಳ್ಯದೆಲೆ, ಬಾಳೆಹಣ್ಣು ಹಾಗೂ ತೆಂಗಿನಕಾಯಿ, ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ ಖುಷಿಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ಅವರು, ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ನಾಡಹಬ್ಬ  ಸಹಕಾರಿಯಾಗಲಿದೆ. ಆ ಮೂಲಕ ಸಂಸ್ಕೃತಿ ಹಾಗೂ ಬದುಕಿನ ಸಂದೇಶವನ್ನು ಎಲ್ಲರಿಗೂ ತಲುಪಿಸುವುದೇ ಈ ಉತ್ಸವದ ಉದ್ದೇಶವಾಗಿದೆ ಎಂದರು.

Tags: