ಮೈಸೂರು: ನಾಳೆ (ಆ.09) ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿನ ಜನರು ಕೆ.ಎಸ್.ಆರ್.ಟಿ.ಸಿ ಬಸ್, ಖಾಸಗಿ ಬಸ್ ಹಾಗೂ ಕಾರ್ ಮತ್ತು ಬೈಕ್‌ಗಳಲ್ಲಿ ಆಗಮಿಸಲಿದ್ದು, ಕಾರ್ಯಕ್ರಮದ ಸುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುವ ಸಾಧ್ಯತೆಯಿರುತ್ತದೆ.
ಹೀಗಾಗಿ, ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಹಾರಾಜ ಕಾಲೇಜು ಮೈದಾನದ ಸುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಮತ್ತು ವಾಹನಗಳ ನಿಲುಗಡೆ ನಿರ್ಬಂಧಿಸಿ ಬದಲಿ ಮಾರ್ಗಗಳನ್ನು ಕಲ್ಪಿಸಿ, ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿ ನಗರ ಪೊಲೀಸ್ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ.
ಬೆಳಗ್ಗೆ 08 ಗಂಟೆಯಿoದ ಸಂಜೆ 06 ಗಂಟೆಯವರೆಗೆ ಕೆ.ಎಸ್.ಆರ್.ಟಿ.ಸಿ ರೂಟ್ ಬಸ್ಸುಗಳು ಸಂಚರಿಸಬೇಕಾದ ಮಾರ್ಗ
ಹುಣಸೂರು ಮಾರ್ಗದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಮಾರ್ಗ:- ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಿನಕಲ್ ಫ್ಲೈ ಓವರ್ ಜಂಕ್ಷನ್- ಎಡತಿರುವು- ರಿಂಗ್ ರಸ್ತೆ- ರಾಯಲ್ ಇನ್ ಜಂಕ್ಷನ್- ಬಲ ತಿರುವು- ಕೆ.ಆರ್.ಎಸ್. ರಸ್ತೆ- ವಿ.ವಿ.ಪುರಂ ವೃತ್ತ- ಆಕಾಶವಾಣಿ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಮೆಟ್ರೋಪೋಲ್ ವೃತ್ತ-ಮೂಡಾವೃತ್ತ -ಎಡತಿರುವು-ರಮಾವಿಲಾಸ ರಸ್ತೆ- ಬನುಮಯ್ಯ ಜಂಕ್ಷನ್-ಬಲತಿರುವು-ಬಿ.ರಾಚಯ್ಯ ವೃತ್ತ-ಎಡತಿರುವು- ಪುರಂದರ ರಸ್ತೆ-ಕುಸ್ತಿ ಅಖಾಡ ಜಂಕ್ಷನ್-ಹಾರ್ಡಿಂಜ್ ವೃತ್ತದ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪುವುದು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹುಣಸೂರು ರಸ್ತೆಗೆ ಮಾರ್ಗ:- ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡ ತಿರುವು ಪಡೆದು ಇರ್ವಿನ್ ರಸ್ತೆ- ನೆಹರು ವೃತ್ತ- ಆಯುರ್ವೇದಿಕ್ ವೃತ್ತ- ರೈಲ್ವೇ ನಿಲ್ದಾಣ ವೃತ್ತ- ದಾಸಪ್ಪ ವೃತ್ತ- ಬಲ ತಿರುವು- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತ- ರಾಯಲ್ ಇನ್ ಜಂಕ್ಷನ್- ಎಡ ತಿರುವು- ರಿಂಗ್ ರಸ್ತೆ- ಹಿನಕಲ್ ಫ್ಲೈ ಓವರ್ ಜಂಕ್ಷನ್- ಬಲ ತಿರುವು ಪಡೆದು ಹುಣಸೂರು ರಸ್ತೆಯಲ್ಲಿ ಮುಂದುವರೆಯುವುದು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬೆಂಗಳೂರು ರಸ್ತೆಗೆ ಮಾರ್ಗ:- ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಸ್ ನಿಲ್ದಾಣದ ಬಳಿ ಎಡ ತಿರುವು- ಫೈವ್ ಲೈಟ್ ವೃತ್ತ- ಡಾ.ರಾಜಕುಮಾರ್ ವೃತ್ತ- ಟಿಪ್ಪು ವೃತ್ತ- ಬಲ ತಿರುವು- ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಕೆಂಪೇಗೌಡ ಜಂಕ್ಷನ್ ಮೂಲಕ ಮುಂದುವರೆಯುವುದು.
ಬೆಳಗ್ಗೆ 08. ಗಂಟೆಯಿoದ ಸಂಜೆ 06 ಗಂಟೆಯವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುವ ರಸ್ತೆಗಳ ವಿವರ
ಡಿ.ಸಿ ಕಛೇರಿ ಆರ್ಚ್ ಗೇಟ್ ಜಂಕ್ಷನ್‌ನಿoದ ಕೋರ್ಟ್ ಜಂಕ್ಷನ್‌ವರೆಗಿನ ಕೆ.ಆರ್.ಬಿ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂದಿಸಿದೆ.
ಸೆಂಟ್ ಜೋಸೆಫ್ ಜಂಕ್ಷನ್‌ನಿಂದ ಮೆಟ್ರೋಪೋಲ್ ವೃತ್ತದವರೆಗಿನ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ರಾಮಸ್ವಾಮಿ ವೃತ್ತದಿಂದ ಅಗ್ನಿಶಾಮಕ ಠಾಣೆ ಜಂಕ್ಷನ್ ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. ಮೂಡಾ ಜಂಕ್ಷನ್ ನಿಂದ ವಿ.ಎಂ.ಡಿ ಜಂಕ್ಷನ್ ವರೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು, ರೋಟರಿ ಜಂಕ್ಷನ್ ನಿಂದ ಕೆ.ಆರ್.ಬಿ ರಸ್ತೆ ಜಂಕ್ಷನ್ ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳು ಹಾಗೂ ಜೆ.ಎಲ್.ಬಿ ಜಂಕ್ಷನ್ ನಿಂದ ಕೆ.ಆರ್.ಬಿ ರಸ್ತೆ ಜಂಕ್ಷನ್ ವರೆಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಜೊತೆಗೆ ಕಲಾಮಂದಿರ ಜಂಕ್ಷನ್‌ನಿoದ ರೈಲ್ವೇ ಗೇಟ್ ಜಂಕ್ಷನ್‌ವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.
ಡಾ. ಪದ್ಮ ವೃತ್ತದಿಂದ ಚಂದ್ರಮೌಳೇಶ್ವರ ದೇವಸ್ಥಾನ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.
ರಮ್ಯ ಹೋಟೆಲ್ ಜಂಕ್ಷನ್ ನಿಂದ ಕುಕ್ಕರಹಳ್ಳಿ ಗ್ರಾಮ ಅರಳಿಕಟ್ಟೆ ಜಂಕ್ಷನ್ ವರೆಗಿನ ಸ್ವಿಮಿಂಗ್ ಫೂಲ್ ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.
ಸರಸ್ವತಿಪುರಂ 5 ನೇ ಕ್ರಾಸ್ ಜಂಕ್ಷನ್‌ನಿoದ (ಟಿ.ಟಿ.ಎಲ್ ಕಾಲೇಜು ಜಂಕ್ಷನ್) ಬೇಕ್ ಪಾಯಿಂಟ್ ವರೆಗೆ ವಾಹನಗಳ ಸಂಚಾರವನ್ನು ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ. ವಿಜಯ ಬ್ಯಾಂಕ್ ವೃತ್ತದಿಂದ ವಿ.ಎಂ.ಡಿ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.
ಬದಲಿ ಮಾರ್ಗ : ಹಾಸನ, ಮಡಿಕೇರಿ , ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲ ತಿರುವು ಪಡೆದು ಚದುರಂಗ ರಸ್ತೆ ಮೂಲಕ ಮುಂದೆ ಸಾಗುವುದು.
ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ’ ಆಗಮಿಸುವ ವಾಹನಗಳು ಸೆಂಟ್ ಜೋಸೆಫ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟೆಂಪಲ್ ರಸ್ತೆ- ಬಿ.ಸಿ ಅಂಗಯ್ಯ ವೃತ್ತ- ಕೆ.ಆರ್.ಎಸ್ ರಸ್ತೆ ಮೂಲಕ ಮುಂದೆ ಸಾಗುವುದು.
ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಪಡುವಾರಹಳ್ಳಿ ವೃತ್ತದ ಬಳಿ ಎಡ ತಿರುವು ಪಡೆದು ಮಾತೃಮಂಡಳಿ ವೃತ್ತದ ಮೂಲಕ ಮುಂದೆ ಸಾಗುವುದು.
ಚಾಮರಾಜ ಜೋಡಿ ರಸ್ತೆಯಿಂದ ಆಗಮಿಸುವ ವಾಹನಗಳು ಆರ್.ಟಿ.ಓ ವೃತ್ತದ ಮೂಲಕ ಮುಂದೆ ಸಾಗುವುದು, ಜೆ.ಎಲ್.ಬಿ ರಸ್ತೆಯಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ್ತ- ಕೆ.ಆರ್.ಎಸ್ ರಸ್ತೆ- ವಿ.ವಿ.ಪುರಂ ವೃತ್ತದ ಮೂಲಕ ಮುಂದೆ ಸಾಗಬೇಕು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.