ಮೈಸೂರು : ಸ್ವಚ್ಛ ನಗರಿ ಮೈಸೂರಿನ ರಮಣೀಯ ಸ್ಥಳವಾದ ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗಾಗಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ಮೈಸೂರು ನಗರ ಪಾಲಿಕೆ ವತಿಯಿಂದ ಕುಕ್ಕರಹಳ್ಳಿ ಕೆರೆಯಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಶಾಲಾ ಮಕ್ಕಳಿಗಾಗಿ ಪರಿಸರ ಸಂರಕ್ಷಣೆಯ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ವಿವಿಧ ಶಾಲಾ-ಕಾಲೇಜುಗಳು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮೈಸೂರು, ಎಸ್‌ಜೆಸಿಇ ಕಾಲೇಜು, ಎಂಐಟಿ ಕಾಲೇಜು, ಯುವರಾಜ ಕಾಲೇಜಿನ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಮೈಸೂರು ಗ್ರಾಹಕ ಪರಿಷತ್, ಕ್ಲೀನ್ ಮೈಸೂರು ಫೌಂಡೇಷನ್ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದ ಸ್ವಯಂ ಸೇವಕರಿಂದ ಕುಕ್ಕರಹಳ್ಳಿ ಕೆರೆ ಸುತ್ತಲು ತ್ಯಾಜ್ಯ ಸಂಗ್ರಹಣೆ ಹಾಗೂ ಸ್ವಚ್ಛತಾ ಕಾರ್ಯ ನಡೆಯಿತು. ಅಭಿಯಾನದಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ವಯಂ ಸೇವರಕರು ಭಾಗವಹಿಸಿದ್ದರು.
ಸ್ವಚ್ಛತಾ ಅಭಿಯಾನದಲ್ಲಿ ಒಟ್ಟು 410 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಅಲ್ಲದೇ, ಕಸ ಹಾಗೂ ತ್ಯಾಜ್ಯವನ್ನು ಬೀಸಾಡದಂತೆ, ಪರಿಸರ ಸಂರಕ್ಷಣೆ, ಸ್ವಚ್ಛತೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಕೆ.ಪಿ.ಕಾನ್ವೆಂಟ್, ಸೇಂಟ್ ಪಾಲ್ ಶಾಲೆ, ಲಿಟಲ್ ಇನ್ಛೆಂಟ್ ಶಾಲೆ, ಅಮೃತ್ ವಿದ್ಯಾಲಯ, ವಿದ್ಯಾವರ್ಧಕ ಮತ್ತು ಪ್ರಗತಿ ವಿದ್ಯಾಲಯದ ಶಾಲಾ ಮಕ್ಕಳು 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಬಳಿಕ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಮೈಸೂರು ನಗರ ಪಾಲಿಕೆಯ ಸ್ವಚ್ಛ ಭಾರತ ಮಿಷನ್ ನೋಡೆಲ್ ಅಧಿಕಾರಿ ಕೆ.ಎಸ್.ಮೃತ್ಯುಂಜಯ, ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಮೀನಾಕ್ಷಿ, ಕ್ಲೀನ್ ಮೈಸೂರು -ಂಡೇಷನ್‌ನ ಲೀಲಾ ವೆಂಕಟೇಶ್, ಪಾಲಿಕೆಯ ಎಲ್ಲ ಪರಿಸರ ಇಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.




