ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿಯಲ್ಲಿ ಇಂದು ತನಿಖೆ ನಡೆಸಲು ಇ.ಡಿ.ದಾಳಿ ನಡೆಸಿದ್ದಾರೆ. ಆದರೆ ಇ.ಡಿ.ಅಧಿಕಾರಿಗಳಿಗೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಫೈಲ್‌ಗಳು ಸಹ ದೊರೆಯುವುದಿಲ್ಲ. ಏಕೆಂದರೆ ಮುಡಾ ಪ್ರಕರಣದ ಫೈಲ್‌ಗಳು ಕಚೇರಿಯಲ್ಲಿರುವುದಕ್ಕಿಂತ ಅಧಿಕವಾಗಿ ಸಚಿವ ಭೈರತಿ ಸುರೇಶ್ ಅವರ ಮನೆಯಲ್ಲಿಯೇ ಇವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇ.ಡಿ.ಮೊದಲು ಸಚಿವ ಭೈರತಿ ಸುರೇಶ್ ಅವರ ನಿವಾಸ ಮತ್ತು ಅವರ ಕಚೇರಿಯ ಮೇಲೆ ದಾಳಿ ಮಾಡಬೇಕು. ಮುಡಾದ ಅನೇಕ ಫೈಲ್‌ಗಳನ್ನು ಹೆಲಿಕಾಫ್ಟರ್ ಮುಖಾಂತರ ಅವರು ಕೊಂಡ್ಯೊದಿದ್ದಾರೆ ಎಂದರು.