ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಗಜಪಡೆ ಮಾವುತರು ಹಾಗೂ ಕಾವಾಡಿಗರಿಗೆ ಜಿಲ್ಲಾಡಳಿತದ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಅರಮನೆ ಆವರಣದಲ್ಲಿಂದು ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಮಾವುತರು ಹಾಗೂ ಕಾವಾಡಿಗರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಮಾವುತರು ಹಾಗೂ ಕಾವಾಡಿಗರ ಕುಟುಂಬಕ್ಕೆ ಶಾಸಕ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಕಾಯಿ ಹೋಳಿಗೆ ತುಪ್ಪ, ತಟ್ಟೆ ಇಡ್ಲಿ ಸಾಂಬರ್, ಚಟ್ನಿ, ಕೇಸರಿಬಾತ್, ಮಸಾಲೆ ದೋಸೆ, ಸಾಗು, ಉದ್ದಿನವಡೆ, ಪೊಂಗಲ್ ಹಾಗೂ ಉಪ್ಪಿಟ್ಟು ಸೇರಿದಂತೆ ವಿಧ ವಿಧದ ಖಾದ್ಯಗಳನ್ನು ಬಡಿಸಿದರು.
ಬಳಿಕ ಮಾವುತರು ಹಾಗೂ ಕಾವಾಡಿಗರ ಕುಟುಂಬದವರು ಉಪಾಹಾರ ಸವಿದು ಖುಷಿಪಟ್ಟರು.