Mysore
17
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಜಾತಿಗಣತಿ ವರದಿ | ಇದೊಂದು ಎದುರಾಳಿ ಮಣಿಸುವ ತಂತ್ರ ಎಂದ ಬಿಜೆಪಿ ಶಾಸಕ

bjp mla t s shrivatsa speaked about caste census

ಮೈಸೂರು : ಜಾತಿ ಜನಗಣತಿ ವರದಿ ಮಂಡನೆ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಲಾಗಿದೆ ಎಂದು ಬಿಜೆಪಿ ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಮಂಡನೆಯು ಎದುರಾಳಿ ಮಣಿಸುವ ತಂತ್ರವಾಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರದ ಅವಧಿ ಮುಕ್ತಾಯವಾಗುವ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಇದಾಗಿದೆ ಎಂದರು.

ಜಾತಿಗಣತಿ ವೈಜ್ಞಾನಿಕವಾಗಿಲ್ಲ. ಇದನ್ನ ಸ್ವತಃ ತಮ್ಮ ಪಕ್ಷದ ಶಾಸಕರು, ಸಚಿವರೇ ಒಪ್ಪುತ್ತಿಲ್ಲ. ಹೀಗಿದ್ದರು ಜಾತಿಗಣತಿ ವರದಿ ಜಾರಿಗೆ ತರುತ್ತಿರುವ ಉದ್ದೇಶ ಬೇರೆಯೇ ಇದೆ ಎಂದು ಹೇಳಿದರು.

ಜಾತಿಗಣತಿ ವರದಿ ಮಂಡನೆ ಮೂಲಕ‌ ಎಲ್ಲರ ಗಮನ ಬೇರೆಡೆ ಸೆಳೆದು ಕಾಂಗ್ರೆಸ್ ತನ್ನ ಹಗರಣಗಳನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ಜಾತಿಗಣತಿ ವರದಿ ಸೋರಿಕೆ ಒಂದು ಟೆಸ್ಟ್ ಡೋಸ್ ಅಷ್ಟೇ ಎಂದು ವ್ಯಂಗ್ಯವಾಡಿದರು.

ಇದೊಂದು ಅವಜ್ಞಾನಿಕ ವರದಿಯಾಗಿದ್ದು, ಮುಂದೆ ಸರ್ಕಾರದ ವಿರುದ್ಧ ಸಾಧು ಸಂತರು, ಸಾಹಿತಿಗಳು ಹೊರಟಕ್ಕೆ ಇಳಿಯಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಗೋಕಾಕ್ ಮಾದರಿ ಚಳುವಳಿ ನಡೆಯಲಿದೆ ಎಂದು ಹೇಳಿದರು.

Tags:
error: Content is protected !!