Mysore
24
clear sky

Social Media

ಶನಿವಾರ, 24 ಜನವರಿ 2026
Light
Dark

ರಾಜ್ಯ ಸರ್ಕಾರದ ಸೊಕ್ಕಿನ ವಿರುದ್ಧ ಬಿಜೆಪಿ ಮೈಸೂರಿನಿಂದಲೇ ಜನಾಕ್ರೋಶ ಯಾತ್ರೆ: ಎಂಎಲ್‌ಸಿ ರವಿಕುಮಾರ್‌

ಮೈಸೂರು: ರಾಜ್ಯ ಸರ್ಕಾರದ ಧಿಮಾಕು, ಅಹಂಕಾರ, ಸೊಕ್ಕಿನ‌ ವಿರುದ್ಧ ಬಿಜೆಪಿ ಮೈಸೂರಿನಿಂದಲೇ ಜನಾಕ್ರೋಶ ಯಾತ್ರೆ ‌ಆರಂಭಿಸಲಿದೆ ಎಂದು ಎಂಎಲ್‌ಸಿ ರವಿಕುಮಾರ್‌ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಹೋರಾತ್ರಿ ಧರಣಿಗೆ ಮುಂದಾಗುವ ಮುನ್ನಾ ದಿನವೂ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿತು. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಏಪ್ರಿಲ್.7ರಿಂದ ಮೈಸೂರಿನಿಂದಲೇ ಹೋರಾಟ ಆರಂಭಿಸುತ್ತೇವೆ. ರಾಜ್ಯ ಸರ್ಕಾರದ ಸೊಕ್ಕನ್ನು ಚಾಮುಂಡೇಶ್ವರಿ ಮುರಿಯಬೇಕು ಎಂಬ ಸಂಕಲ್ಪದೊಂದಿಗೆ ಬಿಜೆಪಿ ಹೋರಾಟ ಆರಂಭಿಸಲಿದೆ. ರಾಜ್ಯ ಸರ್ಕಾರ ಕಸದ ಮೇಲೂ ಟ್ಯಾಕ್ಸ್, ಮನೆಗಳ ಮುಂದೆ ನಿಲ್ಲಿಸುವ ವಾಹನಗಳ ಮೇಲೆ ಟ್ಯಾಕ್ಸ್ ಸೇರಿದಂತೆ ರಾಜ್ಯದ ಜನರಿಗೆ ತೆರಿಗೆ ಭಾರ ಹೊರಿಸುತ್ತಿದೆ. ನವಾಬ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ. ಮೈಸೂರಿನಲ್ಲಿ ಆರಂಭವಾಗುವ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ‌ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಇನ್ನಿತರ ನಾಯಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

Tags:
error: Content is protected !!