Mysore
29
scattered clouds

Social Media

ಬುಧವಾರ, 14 ಜನವರಿ 2026
Light
Dark

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಮಕ್ಕಳ ಮನಸ್ಸು ಗೆದ್ದ “ಸೂರ್ಯ–ಚಂದ್ರ” ಮಕ್ಕಳ ನಾಟಕ

ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ” ಮಕ್ಕಳ ನಾಟಕ ಪ್ರೇಕ್ಷಕರ ಮನ ಗೆದ್ದಿದೆ.

ಡಾ. ಶಿವರಾಮ ಕಾರಂತರವರ ರಚನೆಯಾಗಿರುವ ಈ ನಾಟಕವನ್ನು ರೋಹಿತ್ ಎಸ್. ಬೈಕಾಡಿ ಅವರು ನಿರ್ದೇಶನ ಮಾಡಿದ್ದು, ತೆಕ್ಕಟ್ಟೆಯ ಧಮನಿ ತಂಡದ ಪುಟಾಣಿ ಕಲಾವಿದರು ಅಭಿನಯಿಸಿದರು. ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ನಾಟಕವನ್ನು ಕುತೂಹಲದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಟಕ ಪ್ರದರ್ಶನದ ಬಳಿಕ ಮಾತನಾಡಿದ ಪುಟಾಣಿ ಕಲಾವಿದರು, ಬಹುರೂಪಿ ನಾಟಕೋತ್ಸವದಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಅಭಿನಯಿಸುವ ಅವಕಾಶ ದೊರೆತಿರುವುದು ನಮಗೆ ಹೆಮ್ಮೆಯ ವಿಷಯ. ಮೈಸೂರಿಗೆ ಬಂದು ಇಂತಹ ದೊಡ್ಡ ವೇದಿಕೆಯಲ್ಲಿ ನಾಟಕ ಪ್ರದರ್ಶಿಸಿದ್ದೇವೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತಿದೆ ಎಂದು ಹೇಳಿದರು.

ವೇದಿಕೆಗೆ ತೆರಳುವ ಮೊದಲು ಇದು ದೊಡ್ಡ ವೇದಿಕೆ ಎಂಬ ಅರಿವು ನಮಗೆ ಇರಲಿಲ್ಲ. ಆದರೆ ಸ್ಟೇಜ್ ಮೇಲೆ ಬೆಳಕು ಬೆಳಗುತ್ತಿದ್ದಂತೆಯೇ, ಭಾರಿ ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಇದ್ದಾರೆ ಎಂಬುದು ಗೊತ್ತಾಯಿತು. ಆ ಕ್ಷಣದಲ್ಲಿ ಸ್ವಲ್ಪ ಆತಂಕವಾಯಿತು. ಆದರೆ ನಮ್ಮ ಶಿಕ್ಷಕರು ಭಯಪಡಬಾರದು, ಧೈರ್ಯದಿಂದ ಅಭಿನಯಿಸಬೇಕು ಎಂದು ಹೇಳಿದ ಮಾತು ನೆನಪಾಯಿತು. ಆ ಧೈರ್ಯದಿಂದ ನಾವು ಅಭಿನಯವನ್ನು ಯಶಸ್ವಿಯಾಗಿ ನೆರವೇರಿಸಿದ್ದೇವೆ ಎಂದು ಪುಟಾಣಿ ಕಲಾವಿದರು ತಮ್ಮ ಅನುಭವ ಹಂಚಿಕೊಂಡರು.

 

Tags:
error: Content is protected !!