ಮೈಸೂರು: ನಗರದ ಸಂತ ಫಿಲೋಮಿನಾ ಕಾಲೇಜಿನ ಪುಟ್ ಬಾಲ್ ಮೈದಾನದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಾರ್ಷಿಕ ಅಥ್ಲೆಟಿಕ್ ಮೀಟ್ ಕಾರ್ಯಕ್ರಮವನ್ನು ಟೆರಿಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಆಂಟೋನಿ ಮೋಯಿಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರೆವರೆಂಡ್ ಫಾದರ್ ಡಾ.ಲೂರ್ದು ಪ್ರಸಾದ್ ಕಾಲೇಜಿನ ಆಡಳಿತ ಮಂಡಳಿ ರೆವರೆಂಡ್ ಫಾದರ್ ಜ್ಞಾನ ಪ್ರಗಾಸಮ್, ಡೇವಿಡ್ ಎಸ್ಮ ಸಗಾಯರಾಜ್, ಪ್ರಾಂಶುಪಾಲ ಡಾ.ರವಿ ಜೆ.ಡಿ.ಸಲ್ಡಾನ, ಆಡಳಿತ ವಿಭಾಗದ ಉಪ ಪ್ರಾಂಶುಪಾಲ ರೊನಾಲ್ಡ್ ಪ್ರಕಾಶ್ ಕುಟಿನಾ, ಉಪ ಪ್ರಾಂಶುಪಾಲ ಪ್ರೊ.ನಾಗರಾಜ ಅರಸ್, ಐಕ್ಯೂಎಸಿ ಸಂಯೋಜಕ ಡಾ.ಥಾಮಸ್ ಎ. ಡಾ. ರೀನಾ ಫ್ರಾನ್ಸಿಸ್, ಎಸ್ ಪೆರಿಯನಾಯಗಮ್ಮಾಳ್, ಕ್ರೀಡಾ ಕಾರ್ಯದರ್ಶಿ ವಿಲಿಯಂ ಜೋಸೆಫ್ ಜೆ, ಕಾಲೇಜಿನ ದೈಹಿಕ ನಿರ್ದೇಶಕ ಮುರಳೀಧರ ಕೆ.ಎ ಉಪಸ್ಥಿತರಿದ್ದರು.