Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ನೇಪಾಳ: ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 128ಕ್ಕೆ ಏರಿಕೆ

ಕಠ್ಮಂಡು : ಶುಕ್ರವಾರ ತಡರಾತ್ರಿ ನೇಪಾಳದಲ್ಲಿ ಸಂಭವಿಸಿದ 6.4 ತೀವ್ರತೆಯ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ.

ಘಟನೆಯಲ್ಲಿ 140 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರ್ವತಶ್ರೇಣಿಗಳಿಂದ ಕೂಡಿದ ಈ ಗ್ರಾಮದಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

2015ರಲ್ಲಿ ಈ ಬೆಟ್ಟ ರಾಷ್ಟ್ರದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿ, 9 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟು, 10 ಲಕ್ಷ ಕಟ್ಟಡಗಳು ಹಾನಿಗೀಡಾಗಿದ್ದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ