ಗಾಜಾ: ಇಸ್ರೇಲ್- ಹಮಾಸ್ ಬಂಡುಕೋರರ ನಡುವಿನ ಯುದ್ಧ ನಿಲ್ಲುವುದು ಇಸ್ರೇಲ್ ತನ್ನೆಲ್ಲಾ ಗುರಿಗಳನ್ನು ನಿರ್ದಿಷ್ಟವಾಗಿ ಸಾಧಿಸುವವರೆಗೆ, ಹಮಾಸ್ ನಾಶವಾಗದ ಹೊರತು ಗಾಜಾ ಯುದ್ದ ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಹಮಾಸ್ ನಮ್ಮ ಮೇಲೆ ಭೀಕರ ಹತ್ಯಾಕಾಂಡ ನಡೆಸಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಹಮಾಸ್‌ನ್ನು ನಾಶಗೊಳಿಸಿ ನಮ್ಮ ಒತ್ತೆಯಾಳುಗಳನ್ನು ಮರಳಿ ಕರೆತರಲಾಗುವುದು ಮತ್ತು ಗಾಜಾದಿಂದ ಇಸ್ರೇಲ್‌ಗೆ ಎಂದಿಗೂ ತೊದರೆಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಇಸ್ರೇಲ್ ಸರ್ಕಾರ ರಕ್ಷಣಾ ಪಡೆಗೆ ನಿರ್ದೇಶನ ನೀಡಿದೆ. ನಮ್ಮ ಗುರಿಯನ್ನು ನಿರ್ದಿಷ್ಟವಾಗಿ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಈ ಯುದ್ಧದಲ್ಲಿ ಹಮಾಸ್‌ಗೆ ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ. ಇಲ್ಲಿ ಭದ್ರತೆಯನನು ಮರು ಸ್ಥಾಪಸುವವರೆಗೆ ಹೋರಾಟ ನಿಲ್ಲುವುದಿಲ್ಲ. ಯುದ್ಧದಲ್ಲಿ ಸಂಪೂರ್ಣವಾಗಿ ಜು ಸಾಧಿಸುವವರೆಗೆ ಬೇರೆ ಎಲ್ಲವನ್ನೂ ಬದಿಗಿಡಬೇಕು ಮತ್ತು ಸೇನೆಯೊಂದಿಗೆ ನಾವು ಮುಂದುವರೆಯಬೇಕು ಎಂದು ಅವರು ಹೇಳಿದ್ದಾರೆ.