Mysore
25
scattered clouds

Social Media

ಮಂಗಳವಾರ, 21 ಏಪ್ರಿಲ 2026
Light
Dark

ಆಟೋದಲ್ಲೊಂದು ಆಂಬುಲೆನ್ಸ್; ಜೂನ್‍.26ರಂದು ಬಿಡುಗಡೆ ಆಗಲಿದೆ ‘X&Y’

x&y movie

‘ರಾಮ ರಾಮಾ ರೇ’ ಖ್ಯಾತಿಯ ಡಿ. ಸತ್ಯಪ್ರಕಾಶ್‍ ನಿರ್ದೇಶಿಸುವುದರ ಜೊತೆಗೆ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘X&Y’ ಚಿತ್ರವು ಬಿಡುಗಡೆ ಸಜ್ಜಾಗಿದೆ. ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದ್ದು, ಚಿತ್ರವು ಜೂನ್‍.26ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಈ ಚಿತ್ರದಲ್ಲಿ ‘ಆಂಬು ಆಟೋ’ ಎಂಬ ಹೊಸ ಆಟೋ ಪರಿಚಯಿಸಲಾಗಿದೆ. ಈ ಆಟೋದ ವಿಶೇಷತೆ ಎಂದರೆ, ಆಂಬುಲೆನ್ಸ್ ನಲ್ಲಿರುವಂತೆ ಎಲ್ಲ ಸೌಲಭ್ಯಗಳಿವೆ. ಈ ಆಟೋಗೆ ಆಟೋ ಚಾಲಕರ ಬೆಂಬಲ ಸಿಕ್ಕಿದ್ದು, ಆಟೋ ಚಾಲಕ ‘ಟಗರು’ ಶಿವ ಅವರ ಸಾರಥ್ಯದಲ್ಲಿ ಅನೇಕ ಆಟೋ ಚಾಲಕರು ರೀಲ್ಸ್ ಮಾಡುವ ಮೂಲಕ ಇದರ ಉಪಯೋಗವನ್ನು ಜನರಿಗೆ ತಿಳಿಸುತ್ತಿದ್ದಾರೆ. ಆಟೋ ಚಾಲಕರ ಪ್ರೋತ್ಸಾಹಕ್ಕೆ ಚಿತ್ರತಂಡ ಸಹ ಧನ್ಯವಾದ ತಿಳಿಸಿದೆ.

‘X&Y’ ಚಿತ್ರದಲ್ಲಿ ಸತ್ಯ ಪ್ರಕಾಶ್‍, ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಟೋವನ್ನು ಚಿತ್ರದಲ್ಲಿ ಒಬ್ಬ ಕಲಾವಿದನಂತೆ ಕಲಾತ್ಮಕವಾಗಿ ಬಳಸಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ಈ ‘ಆಂಬು ಆಟೋ’ ಪ್ರಮುಖ ಪಾತ್ರವಹಿಸುತ್ತದೆಯಂತೆ.

‘X&Y’, ಸತ್ಯ ಪ್ರಕಾಶ್‍ ನಿರ್ದೇಶನದ ನಾಲ್ಕನೇ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರವನ್ನು ತಾವೇ ತಮ್ಮ ಸತ್ಯ ಪಿಕ್ಚರ್ಸ್‍ ಬ್ಯಾನರ್ ಅಡಿ ನಿರ್ಮಾಣ ಮಾಡಿ, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸತ್ಯಪ್ರಕಾಶ್‍ ಜೊತೆಗೆ ಅಥರ್ವ ಪ್ರಕಾಶ್, ಬೃಂದಾ ಆಚಾರ್ಯ, ಸುಂದರ್ ವೀಣಾ, ದೊಡ್ಡಣ್ಣ ಮುಂತಾದವರು ನಟಿಸಿದ್ದು, ವಾಸುಕಿ ವೈಭವ್ ಸಂಗೀತ ಮತ್ತು ಲವಿತ್‍ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

‘X&Y’ ಚಿತ್ರದ ಮೂಲಕ ತಂದೆ-ತಾಯಿ ಆಗಲು ಹೊರಟಿರುವ ಇವತ್ತಿನ ತಲೆಮಾರಿನವರ ಕಥೆ ಹೇಳುವುದಕ್ಕೆ ಹೊರಟಿದ್ದಾರೆ ಸತ್ಯಪ್ರಕಾಶ್‍. ತಮ್ಮ ಹಿಂದಿನ ಚಿತ್ರಗಳಂತೆ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.

Tags:
error: Content is protected !!