ಬೆಂಗಳೂರು : ಅಭಿಮಾನ್ ಸ್ಟೂಡಿಯೋದಲ್ಲಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸಮಾಧಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ಗೆ ವಿಷ್ಣು ಅಭಿಮಾನಿಗಳು ಸೋಮವಾರ ಮಧ್ಯಾಹ್ನ ಮುತ್ತಿಗೆ ಹಾಕಿದ್ದಾರೆ.
ಸಾಹಸ ಸಿಂಹನಿಗೆ ಅವಮಾನ ಆಗಿದೆ ಯಾರು ನ್ಯಾಯ ಕೊಡಿಸ್ತಿಲ್ಲ, ತಾರತಮ್ಯ ಮಾಡಲಾಗ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ವಿಷ್ಣುವರ್ಧನ್ ವಿಚಾರದಲ್ಲಿ ನಾವು ಸಾಕಷ್ಟು ಸಲ ಫಿಲ್ಮಚೇಂಬರ್‌ಗೆ ಮನವಿ ಮಾಡಿದರು ಯಾರು ನಮಗೆ ನ್ಯಾಯ ಕೊಡಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಮಾಧಿ ತೆರವು ಮಾಡಿ ನಾಲ್ಕು ದಿನಗಳು ಅಗಿವೆ. ಸಾಹಸ ಸಿಂಹನಿಗಾಗಿ ಅಭಿಮಾನ್ ಸ್ಟುಡಿಯೋ ಜಾಗ ಉಳಿಸಿ ಕೊಡಿ. ಫಿಲ್ಮ್ ಚೇಂಬರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಕನ್ನಡದ ಮೇರು ನಟನಿಗೆ ಅವಮಾನ ಆಗಿದೆ. ನಟ ಸುದೀಪ್ ಬಿಟ್ರೆ ಯಾರಿಗೂ ಕೃತಜ್ಞತೆ ಇಲ್ಲ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದರು.





