Mysore
18
few clouds

Social Media

ಬುಧವಾರ, 28 ಜನವರಿ 2026
Light
Dark

ಶ್ರೀಮಂತ ಉದ್ಯಮಿಯಾದ ಉಪೇಂದ್ರ; ‘ಕರ್ವ’ ನವನೀತ್‍ ಚಿತ್ರದಲ್ಲಿ ನಟನೆ

Upendra

‘UI’ ಚಿತ್ರ ನಿರ್ದೇಶಿಸುತ್ತಿದ್ದರಿಂದ ಉಪೇಂದ್ರ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿರಲಿಲ್ಲ. ಈಗ ‘UI’ ಬಿಡುಗಡೆಯಾಗಿ ಟಿವಿಯಲ್ಲೂ ಪ್ರಸಾರವಾಗಿದೆ. ಈಗ ಉಪೇಂದ್ರ ಒಂದರ ಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿ ಬರುತ್ತಿದೆ. ನಾಗಣ್ಣ ನಿರ್ದೇಶನದ ‘ಭಾರ್ಗವ’ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿರುವ ಸುದ್ದಿ ಕಳೆದ ತಿಂಗಳು ಕೇಳಿ ಬಂದಿತ್ತು. ಇತ್ತೀಚೆಗೆ ತೆಲುಗಿನ ರಾಮ್‍ ಪೋತಿನೇನಿ ಅಭಿನಯದ ಹೊಸ ಚಿತ್ರದಲ್ಲಿ ನಟಸುತ್ತಿರುವುದಾಗಿ ಅವರೇ ಘೋಷಿಸಿದ್ದರು.

ಇದೀಗ ‘ಛೂ ಮಂತರ್’ ನಿರ್ದೇಶಿಸಿದ್ದ ‘ಕರ್ವ’ ನವನೀತ್‍ ನಿರ್ದೇಶನದ ಚಿತ್ರವೊಂದರಲ್ಲಿ ಅವರು ನಟಿಸುತ್ತಿರುವ ಸುದ್ದಿ ಬಂದಿದೆ. ಉಪೇಂದ್ರ ಈ ಚಿತ್ರದಲ್ಲಿ ಶ್ರೀಮಂತ ಉದ್ಯಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಒಬ್ಬ ಚಿರಪರಿಚಿತ ಕ್ರಿಕೆಟ್‍ ಆಟಗಾರ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದುವರೆಗೂ ಹಾರರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿರುವ ನವನೀತ್‍, ಈ ಬಾರಿ ಕ್ರಿಕೆಟ್‍ ಹಿನ್ನೆಲೆಯ ಕಾಮಿಡಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರಂತೆ. ಈ ಚಿತ್ರದ ಒಂದೆಳೆಯನ್ನು ಅವರು ಕೆಲವು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಆದರೆ, ಆ ಸಂದರ್ಭದಲ್ಲಿ ಉಪೇಂದ್ರ ತಮ್ಮದೇ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರಿಂದ, ಈಗ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಚಿತ್ರೀಕರಣ ನಡೆಯಲಿದ್ದು, ಅದನ್ನು ಬಿಡುಗಡೆ ಮಾಡುವುದರ ಜೊತೆಗೆ ಚಿತ್ರದ ಮುಹೂರ್ತ ನೆರವೇರಲಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆಯಂತೆ.

ಈ ಚಿತ್ರವನ್ನು ಯಾರು ನಿರ್ಮಿಸುತ್ತಿದ್ದಾರೆ, ಯಾರೆಲ್ಲಾ ನಟಿಸುತ್ತಿದ್ದಾರೆ, ಯಾರೆಲ್ಲಾ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ.

ಇನ್ನು, ಉಪೇಂದ್ರ ಮಗ ಆಯುಷ್‍ ಸಹ ಹೀರೋ ಆಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಆಯುಷ್‍ ಅಭಿನಯದ ಮೊದಲ ಚಿತ್ರವನ್ನು ಪುರುಷೋತ್ತಮ್‍ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್‍ ಸಿರಿವಂತ್‍ ನಿರ್ಮಿಸುತ್ತಿದ್ದಾರೆ

Tags:
error: Content is protected !!