Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಭಿಮಾನಿಗಳ ಬಗ್ಗೆ ಅಕ್ಕರೆಯ ಮಾತನಾಡಿದ ಕಿಚ್ಚ ಸುದೀಪ್‌

ಬೆಂಗಳೂರು: ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಬೆಂಗಳೂರಿನ ಜಯನಗರದ ಎಂಇಎಸ್‌ ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ನನ್ನ ಫ್ಯಾನ್ಸ್‌ ಯಾವತ್ತೂ ಕಳಂಕ ತರುವ ಕೆಲಸ ಮಾಡುವುದಿಲ್ಲ. ಅಭಿಮಾನಿಗಳು ತೋರಿಸೋ ಪ್ರೀತಿ ವ್ಯಕ್ತಿತ್ವದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಹೋದಲೆಲ್ಲಾ ತಲೆ ಎತ್ತಿಕೊಂಡು ನಿಲ್ತೀವಿ ಅಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅವರಿಗೆ ಕಳಂಕ ತರುವ ಕೆಲಸವನ್ನೂ ಯಾವತ್ತೂ ಮಾಡಲ್ಲ ಎಂದರು.

ಅಭಿಮಾನಿಗಳನ್ನು ಮನೆ ಬಳಿ ಭೇಟಿ ಮಾಡಲು ಆಗಲಿಲ್ಲ. ನನ್ನ ತಂದೆ ತಾಯಿಗೆ ವಯಸ್ಸಾಗಿದೆ. ಕಳೆದ ಬಾರಿ ಅಕ್ಕ-ಪಕ್ಕದ ಮನೆಯವರಿಗೂ ತೊಂದರೆ ಆಗಿದೆ. ಹಾಗಾಗಿ ಇಲ್ಲಿಗೆ ಬಂದು ನಿಮ್ಮೆಲ್ಲರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡೆ ಎಂದು ಸ್ಪಷ್ಟನೆ ನೀಡಿದರು.

ಪ್ರೀತಿ ಹಾಗೂ ಒಳ್ಳೆಯತನ ತೋರಿಸೋದಕ್ಕೆ ಕಾಂಪ್ರೋ ಆಗಬೇಡಿ ಎಂದು ಅಭಿಮಾನಿಗಳಿಗೆ ಇದೇ ವೇಳೆ ಕಿವಿಮಾತು ಹೇಳಿದರು.

 

Tags: