Mysore
19
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಕನ್ನಡದ ಮೊದಲ Zombie ಚಿತ್ರಕ್ಕೆ ‘ಬ್ರೋ ಗೌಡ’ ನಾಯಕ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‍ ಪಾತ್ರ ಮಾಡುತ್ತಿರುವ ‘ಬ್ರೋ ಗೌಡ’ ಅಲಿಯಾಸ್‍ ಶಮಂತ್‍ ಗೌಡ ಜೀವನದಲ್ಲಿ ದಿನಕ್ಕೊಂದು ತಿರುವು, ದಿನಕ್ಕೊಂದು ಸಮಸ್ಯೆ. ಆದರೆ, ನಿಜಜೀವನದಲ್ಲಿ ಶಮಂತ್‍ ಬಹಳ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಶಮಂತ್‍ ಇದೇ ಮೊದಲ ಬಾರಿಗೆ ಹೀರೋ ಆಗುವುದಕ್ಕೆ ಸಜ್ಜಾಗಿದ್ದಾರೆ.

ಹೌದು, ‘ಬಿಗ್‍ ಬಾಸ್‍ – ಸೀಸನ್‍ 8’ರ ಖ್ಯಾತಿಯ ಶಮಂತ್‍ ಅಲಿಯಾಸ್‍ ಬ್ರೋ ಗೌಡ, ಇದೀಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಶಮಂತ್ ಅಭಿನಯದ ಹೊಸ ಚಿತ್ರದ ಅಧಿಕೃತ ಘೋಷಣೆ ಇತ್ತೀಚೆಗೆ ಆಗಿದ್ದು, ಈ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಹೆಸರೇನು? ಈ ವಿಷಯದ ಬಗ್ಗೆ ಚಿತ್ರತಂಡ ಬಾಯಿಬಿಟ್ಟಿಲ್ಲ. ಆದರೆ, ಇದು ಕನ್ನಡದ ಮೊದಲ Zombie (ಪ್ರೇತ) ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಆನಂದ್‍ ರಾಜ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅನಿರುದ್ಧ್ ಅಭಿನಯದ ‘ಚೆಫ್‍ ಚಿದಂಬರ’ ಮತ್ತು ವಿಜಯ್‍ ರಾಘವೇಂದ್ರ ಅಭಿನಯದ ‘ರಾಘು’ ಚಿತ್ರಗಳನ್ನು ಆನಂದ್‍ ರಾಜ್‍ ನಿರ್ದೇಶನ ಮಾಡಿದ್ದರು. ಎರಡೂ ಕ್ರೈಂ ಥ್ರಿಲ್ಲರ್‍ ಚಿತ್ರಗಳಾಗಿದ್ದವು. ಈ ಬಾರಿ ಬೇರೆ ತರಹದ ಪ್ರಯತ್ನವೊಂನ್ನು ಮಾಡುತ್ತಿದ್ದಾರೆ ಆನಂದ್ ರಾಜ್‍.

ಈ ಚಿತ್ರದಲ್ಲಿ ಬ್ರೋ ಗೌಡ ನಾಯಕನಾಗಿ ನಟಿಸುತ್ತಿರುದರ ಜೊತೆಗೆ ಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಅವರು ಬ್ರೋ ಮೀಡಿಯಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಸನ್‍ರೈಸ್‍ ಸಿನಿಮಾಸ್‍ ಎಂಬ ಸಂಸ್ಥೆ ಸಹ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ.

ಏಪ್ರಿಲ್‍ ತಿಂಗಳನಿಂದ ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ಉದಯ್‍ ಲೀಲಾ ಅವರ ಛಾಯಾಗ್ರಹಣ ಮತ್ತು ವಿಜೇತ್‍ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ವಿಷಯ ಸದ್ಯದಲ್ಲೇ ಹೊರಬೀಳಲಿದೆ.

Tags:
error: Content is protected !!