ಬೆಂಗಳೂರು: ಕೆಜಿಎಫ್-2 ಯಶಸ್ಸಿನ ನಂತರ ಇಡೀ ದೇಶದ ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್.
ಟಾಕ್ಸಿಕ್ ಚಿತ್ರದ ಪ್ರಚಾರ ಯಾವಾಗ ಆರಂಭವಾಗುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಈಗ ಸಿಹಿಸುದ್ದಿಯೊಂದನ್ನು ನೀಡಿದೆ. ಫೆಬ್ರವರಿ.20ರ ಶುಕ್ರವಾರ ಬೆಳಿಗ್ಗೆ ಸರಿಯಾಗಿ 9.35ಕ್ಕೆ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಲಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರತಂಡದಿಂದ ನಾಳೆ 2ನೇ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಎರಡನೇ ಟೀಸರ್ ಮೂಲಕ ಚಿತ್ರತಂಡ ಯಾವ ರೀತಿಯ ಸರ್ಪ್ರೈಸ್ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಯಶ್ ಅವರ ಹೊಸ ಲುಕ್ ಮತ್ತು ಸಿನಿಮಾದ ಶೈಲಿ ಹೇಗಿರಲಿದೆ ಎಂಬುದನ್ನು ನಾಳೆ ಉತ್ತರ ಸಿಗಲಿದೆ.
ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಇಂದು ಹೊಸ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಖಚಿತಪಡಿಸಿವೆ. ಈ ಪೋಸ್ಟರ್‌ನಲ್ಲಿ ಯಶ್ ಅವರು ಹಿಮದ ಹೊದಿಕೆಯ ಮೇಲೆ ರಕ್ತಸಿಕ್ತ ರಣಭೂಮಿಯಲ್ಲಿ ನಿಂತಿರುವಂತೆ ಕಾಣುತ್ತಿದ್ದು, ಸಿನಿಮಾದ ಮೇಲೆ ಭಾರೀ ಕುತೂಹಲ ಮೂಡಿಸಿದೆ.





