ಬೆಂಗಳೂರು: ಕನ್ನಡದ ಕಿರುತೆರೆಯ ಅತ್ಯಂತ ಪ್ರತಿಭಾವಂತ ನಿರ್ಮಾಪಕ, ನಿರ್ದೇಶಕ ವಿನೋದ ಧೋಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಿರುತೆರೆಯ ಧಾರಾವಾಹಿಗಳಾದ ಕಲರ್ಸ್ ಕನ್ನಡದ ಕರಿಮಣಿ ಹಾಗೂ ಉದಯ ಟಿವಿಯ ಗಂಗೆ ಗೌರಿಗೆ ನಿರ್ಮಾಪಕರಾಗಿದ್ದರು. ಈ ಧಾರಾವಾಹಿಗಳು ಜನಪ್ರಿಯವಾಗಿ ನಡೆಯುತ್ತಿದ್ದ ವೇಳೆಯಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಮಗಳು ಜಾನಕಿಯ ಮೊದಲ ಐದು ಎಪಿಸೋಡಿನ ತಾಂತ್ರಿಕ ನಿರ್ದೇಶನ ಮಾಡಿದ್ದ ಇವರು, ಮುಕ್ತ, ಮುಕ್ತ ಮುಕ್ತ ಧಾರಾವಾಹಿಗಳಿಗೆ ಎಪಿಸೋಡ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಇತ್ತೀಚೆಗೆ ಅಶೋಕ್ ಬ್ಲೇಡ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದ ಇವರು ಚಿತ್ರೀಕರಣ, ಸಾಲದ ಭಾದೆಯಿಂದ ನಿಧನ ಹೊಂದಿದ್ದಾರೆ ಎಂದು ಊಹಿಸಲಾಗಿದೆ.





