Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಹೊಸ ಚಿತ್ರ ಘೋಷಿಸಿದ ತರುಣ್‍ ಸುಧೀರ್: ಈ ಬಾರಿ ದರ್ಶನ, ಶರಣ್ ಇಬ್ಬರೂ ಇಲ್ಲ

ಸಾಮಾನ್ಯವಾಗಿ ತರುಣ್‍ ಸುಧೀರ್‍ ನಿರ್ದೇಶನದ ಚಿತ್ರಗಳೆಂದರೆ, ಅದರಲ್ಲಿ ದರ್ಶನ್ ನಾಯಕನಾಗಿ ಇರಬೇಕು. ಇಲ್ಲ, ಅವರು ಚಿತ್ರ ನಿರ್ಮಾಣಕ್ಕಿಳಿಯುತ್ತಾರೆ ಎಂದರೆ ಅದರಲ್ಲಿ ಶರಣ್‍ ಇರಲೇಬೇಕು. ಈಗ ದರ್ಶನ್ ಮತ್ತು ಶರಣ್‍ ಇಬ್ಬರನ್ನೂ ಬಿಟ್ಟು, ಬೇರೆಯವರೊಂದಿಗೆ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ತರುಣ್‍ ಸುಧೀರ್‍.

‘ಕಾಟೇರ’ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂತು. ಆದರೆ, ತರುಣ್‍ ಸುಧೀರ್‍ ಯಾವೊಂದು ಹೊಸ ಚಿತ್ರವನ್ನೂ ಘೋಷಿಸಿರಲಿಲ್ಲ. ಇಷ್ಟರಲ್ಲಿ ಶುರುವಾಗಬೇಕಿದ್ದು, ದರ್ಶನ್‍ ಅಭಿನಯದಲ್ಲಿ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ್‍ ಜೈಲು ಪಾಲಾಗಿದ್ದರಿಂದ ತಡವಾಗಿದೆ. ಆ ಚಿತ್ರ ಇನ್ನೊಂದು ವರ್ಷ ಶುರುವಾಗುವುದು ಸಂಶಯವೇ. ಹೀಗಿರುವಾಗಲೇ, ತರುಣ್‍ ನಿರ್ದೇಶನವನ್ನು ಪಕ್ಕಕ್ಕಿಟ್ಟು, ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ತರುಣ್ ಈ ಹಿಂದೆ ಅಟ್ಲಾಂಟ ನಾಗೇಂದ್ರ ಜೊತೆಗೆ ಸೇರಿ ’Rambo 2’ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿಯೂ ನಾಗೇಂದ್ರ ಜೊತೆಗೆ ಕೈಜೋಡಿಸಿರುವ ತರುಣ್, ಒಂದು ಹೊಸ ಚಿತ್ರವನ್ನು ನಿರ್ಮಿಸುವುದಕ್ಕೆ ಅಣಿಯಾಗುತ್ತಿದ್ದಾರೆ. ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ಈ ಹಿಂದೆ ‘ಕಾಟೇರ’ ಚಿತ್ರದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ಹೊಸ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.

ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆಯುವ ಕಥೆಯಾಗಲಿದೆಯಂತೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್‍ ನೀಡಲಾಗಿದೆ.

ಈ ಹೊಸ ಚಿತ್ರದಲ್ಲಿ ಹೆಚ್ಚಾಗಿ ಹೊಸಬರೇ ಇರಲಿದ್ದು, ಡಿಸೆಂಬರ್‍.25ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಇನ್ನು, ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಶೀರ್ಷಿಕೆ ಘೋಷಣೆ ಆಗಲಿದ್ದು, ತರುಣ್‍ ಚಿತ್ರಗಳಿಗೆ ಕೆಲಸ ಮಾಡುವ ಪ್ರಮುಖ ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ಸುಧಾಕರ್‍ ರಾಜ್‍ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್‍ ಸಂಕಲನವಿದೆ.

 

Tags:
error: Content is protected !!